ಜಿಲ್ಲೆಯ 6 ಮತಗಟ್ಟೆಗಳ ಸ್ಥಳ ಹಾಗೂ 34 ಮತಗಟ್ಟೆಗಳ ಹೆಸರು ಪರಿಷ್ಕರಣೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ 6 ಮತಗಟ್ಟೆಗಳ ಸ್ಥಳ ಹಾಗೂ 34 ಮತಗಟ್ಟೆಗಳ ಹೆಸರು ಪರಿಷ್ಕರಣೆಗೆ ಭಾರತ ಚುನಾವಣಾ ಆಯೋಗ ಅನುಮೋದನೆ ನೀಡಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ವಿಶೇಷ ಸಂಕ್ಷಿಪ್ತ ಮತದಾರ ಪಟ್ಟಿ ಪರಿಷ್ಕೃರಣೆ ಕುರಿತು ª ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ ಅವರು ಮಾತನಾಡಿದರು.

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025 ಸಂಬಂಧ ಜಿಲ್ಲೆಯ ್ಯಾಷನಲೈಜೇಷನ್ ಆಫ್ ಪೊಲೀಂಗ್ ಸ್ಟೇಷನ್ ಪಟ್ಟಿ ಪ್ರಕಟಿಸಲಾಗಿದೆ. ಪಟ್ಟಿಯನ್ನು ಎಲ್ಲಾ ರಾಜಕೀಯ ಪಕ್ಷಗಳ ಏಜಂಟರುಗಳಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 1661 ಮತಗಟ್ಟೆಗಳು ಇದ್ದು, ಮೊಳಕಾಲ್ಮೂರು ಕ್ಷೇತ್ರದಲ್ಲಿ 285, ಚಳ್ಳಕೆರೆ 260, ಚಿತ್ರದುರ್ಗ 288, ಹಿರಿಯೂರು 287, ಹೊಸದುರ್ಗ 242 ಹಾಗೂ ಹೊಳಲ್ಕೆರೆ 299 ಮತಗಟ್ಟೆಗಳು ಇವೆ.

ಪೈಕಿ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ 6 ಮತಗಟ್ಟೆಗಳ ಸ್ಥಳ ಬದಲಾವಣೆ ಹಾಗೂ 34 ಮತಗಟ್ಟೆಗಳ ಹೆಸರುಗಳನ್ನು ಸರಿಪಡಿಸಿ ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಭೆಯಲ್ಲಿ ಮಾಹಿತಿ ನೀಡಿದರು.

ಕಾಂಗ್ರೇಸ್ ಪಕ್ಷದ ಡಿ.ಎನ್.ಮೈಲಾರಪ್ಪ, ಜೆಡಿಎಸ್ ಪಕ್ಷದ ಡಿ.ಗೋಪಾಲಸ್ವಾಮಿ ನಾಯಕ, ಸಿಪಿಐ ಪಕ್ಷದ ಗೌಸ್ ಪೀರ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

- Advertisement -  - Advertisement - 
Share This Article
error: Content is protected !!
";