ಬೇಕು ಎನ್ನುವವನೇ ಬಡವ, ಸಾಕು ಎನ್ನುವವನೇ ಶ್ರೀಮಂತ: ಯಶೋಧಾ ಪ್ರಕಾಶ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀಮಾತೆ ಶಾರದಾದೇವಿಯವರು ತಿಳಿಸಿದಂತೆ ಬೇಕು ಎನ್ನುವವನೇ ಬಡವ ಸಾಕು ಎನ್ನುವವನೇ ಶ್ರೀಮಂತ ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥೆ ಜಿ ಯಶೋಧಾ ಪ್ರಕಾಶ್ ತಿಳಿಸಿದರು.

ನಗರದ ಶಿವನಗರದ  ತಮ್ಮ ಜಿ.ವಿ.ಎಸ್.ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ಮುನ್ನಡೆಸುವ ಮಹಾಶಕ್ತಿ” ಎಂಬ ಅಧ್ಯಾಯವನ್ನು ಓದಿ ಅರ್ಥ ವಿವರಣೆ ನೀಡಿದರು. 

- Advertisement - 

                        ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ವಿಶೇಷ ಭಜನೆ ಮತ್ತು ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಲಿಕಾ ತರಗತಿ ನಡೆಯಿತು.  

                 ಕಾರ್ಯಕ್ರಮದಲ್ಲಿ ಶಿಲ್ಪಾ ಮಹೇಶ್, ಶೈಲಜಾ , ಕೃಷ್ಣವೇಣಿ , ಸಂಗೀತ , ರಶ್ಮಿ ವಸಂತ, ರಶ್ಮಿ ರಮೇಶ್, ಗೀತಾವಕ್ಷ್ಮೀ, ಭಾಗ್ಯಲಕ್ಷ್ಮೀ, ಕವಿತಾ ಗುರುಮೂರ್ತಿ, ಸೌಮ್ಯ ಪ್ರಸಾದ್, ಯತೀಶ್ ಎಂ ಸಿದ್ದಾಪುರ, ಸರಸ್ವತಿ, ಶಾರದಮ್ಮ, ಜಯಮ್ಮ ಪಾಲ್ಗೊಂಡಿದ್ದರು.

- Advertisement - 

Share This Article
error: Content is protected !!
";