ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಶನಿವಾರ ರಾತ್ರಿ ಭಾರೀ ಮಳೆಯಾಗಿದ ವರದಿಯಾಗಿದೆ.
ಬೆಂಗಳೂರು ನಗರದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ.
ಶನಿವಾರ ರಾತ್ರಿ ಸುರಿದ ಮಳೆಗೆ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮಳೆಹಾನಿಯಾಗಿದೆ. ನಗರದ 49 ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು ಈ ಪೈಕಿ 3ಕ್ಕೂ ಹೆಚ್ಚು ಪ್ರದೇಶಗಳಲ್ಲಿ 100 ಮಿಲಿ ಮೀಟರ್ ಮಳೆಯಾಗಿದೆ.
ಬಸವೇಶ್ವರ ನಗರದಲ್ಲಿ ೧೦೯.೫೦ ಮಿಮೀ, ನಾಗಪುರದಲ್ಲಿ ೧೦೪ ಮಿಮೀ ಹಾಗೂ ಹಂಪಿನಗರದಲ್ಲಿ ೧೦೨ ಮಿಮೀ ಮಳೆಯಾಗಿದ್ದು, ಭಾರೀ ಅವಾಂತರ ಸೃಷ್ಟಿಸಿದೆ. ರಾತ್ರಿ ೯:೪೫ ಗಂಟೆ ಬಳಿಕ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ.
ಮಳೆ ತಂದ ಅನಾಹುತ:
ಬೆಂಗಳೂರು ನಗರದಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ಭಾರೀ ಅನಾಹುತವನ್ನುಂಟಾಗಿದೆ. ನಗರದ ಬಿನ್ನಿಪೇಟೆಯಲ್ಲಿ ಕಾಂಪೌಡ್ ಕುಸಿದಿದ್ದು, ಹತ್ತಾರು ಗಾಡಿಗಳು ಜಖಂಗೊಂಡಿವೆ. ೪೫ ಮನೆಗಳಿಗೆ ನೀರು ನುಗ್ಗಿದೆ. ಕಾಂಪೌಡ್ ಕುಸಿತ ಪರಿಣಾಮ ೧೬ ಮನೆಗಳಿಗೆ ಜಲದಿಗ್ಭಂಧನ ಉಂಟಾಗಿದೆ.
ಮತ್ತೊಂದೆಡೆ ಕೆ.ಆರ್ ಮಾರುಕಟ್ಟೆಯ ರಸ್ತೆಯಲ್ಲ ಜಲಾವೃತ್ತವಾಗಿತ್ತು. ಮಂಡಿವರೆಗೆ ಮಳೆ ನೀರು ಹರಿಯುತ್ತಿದ್ದರಿಂದ ವಾಹನ ಸವಾರರು ಪರದಾಡವಂತಹ ಸ್ಥಿತಿ ನಿರ್ಮಾಣವಾಗಿತ್ತು. ಸ್ಯಾಂಕಿ ರಸ್ತೆಯಲ್ಲಿ ನೀರು ನಿಂತು ಅಕ್ಷರಶಃ ವಾಹನ ಸವಾರರು ನಲುಗಿ ಹೋಗಿದ್ದರು.
ಟ್ರಾಫಿಕ್ ಜಾಮ್:
ನಗರದಲ್ಲಿ ಬಿದ್ದ ಭಾರೀ ಮಳೆ ಒಂದಡೆಯಾದರೆ, ಮತ್ತೊಂದಡೆ ಟ್ರಾಫಿಕ್ ಜಾಮ್? ಸಮಸ್ಯೆ ಏಕಕಾಲಕ್ಕೆ ಸಂಭವಿಸಿತ್ತು. ಬಳ್ಳಾರಿ ರಸ್ತೆ ಮಾರ್ಗ ಮಳೆಯಿಂದಾಗಿ ಸ್ತಬ್ದವಾಗಿತ್ತು. ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರ ಪರಿಸ್ಥಿತಿ ಹೇಳತೀರದಾಗಿತ್ತು.
ಗಂಟೆಗಳ ರೋಡ್ ಜಾಮ್ ಹಾಗೆ ಮುಂದುವರೆದಿತ್ತು. ಅತ್ತ ಸಾರ್ವಜನಿಕರು, ವಾಹನ ಸವಾರರು ಮಧ್ಯ ಸಿಲುಕಿಕೊಂಡು ಹರಸಹಾಸ ಪಡುತ್ತಿದ್ದ ದೃಶ್ಯ ಕಂಡು ಬಂದಿತ್ತು.
ಕೆರೆಯಂತಾದ ರಸ್ತೆ:
ನಗರದ ಟೌನ್ ಹಾಲ್, ಕಾರ್ಪೋರೇಷನ್ ಸರ್ಕಲ್, ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಮಳೆಯಾಗಿದ್ದರಿಂದಾಗಿ ಹೆಚ್ಚಿನ ನೀರು ರಸ್ತೆಗಳು ಮೇಲೆ ಹರಿದಿದ್ದರಿಂದಾಗಿ ರಸ್ತೆಗಳು ಕೆರೆಯಂತಾಗಿದ್ದವು.
ಮಳೆಯಲ್ಲೇ ವಾಹನ ಸವಾರರು ಸಿಕ್ಕ ಸಿಕ್ಕ ಜಾಗ, ಸಂದಿಗೊಂದಿಯಲ್ಲಿ ಕಿರಿದಾದ ರಸ್ತೆಯಲ್ಲೇ ತಮ್ಮ ಮನೆಗಳಿಗೆ ತೆರಳಲು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.