ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ ಅವರೇ, ಬೆಂಗಳೂರಿನಲ್ಲಿ ಮೃತ್ಯು ಕೂಪಗಳಾಗಿರುವ ರಸ್ತೆಗುಂಡಿಗಳನ್ನು ಮುಚ್ಚಲು ತಾವು ನೀಡಿದ್ದ ಡೆಡ್ ಲೈನ್ ಯಾವ ತಾರೀಖಿಗೆ ಮುಗಿಯುತ್ತದೆ ಅಂತ ನೆನಪಿದೆಯಾ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಇವತ್ತು ಯಾವ ತಾರೀಖು ಅಂತ ಗೊತ್ತಿದೆಯಾ? ರಸ್ತೆಗುಂಡಿ ಮುಚ್ಚಲು ಹಣ ಬಿಡುಗಡೆ ಮಾಡಿಲ್ಲವೋ? ಅಥವಾ ನಿಮ್ಮ ಮಾತಿಗೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತಿಲ್ಲ ಕೊಡುತ್ತಿಲ್ಲವೋ?
ನಾಲಾಯಕ್ ಸರ್ಕಾರ, ಅಸಮರ್ಥ ಮಂತ್ರಿಗಳು. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು. ಜನ ಛೀ.. ಥೂ… ಅಂತ ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಉಗಿಯುತ್ತಿದ್ದಾರೆ, ಶಾಪ ಹಾಕುತ್ತಿದ್ದಾರೆ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಕರ್ನಾಟಕವನ್ನು ಉಳಿಸಿ ಎಂದು ಅಶೋಕ್ ತಾಕೀತು ಮಾಡಿದ್ದಾರೆ.

