ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜೀವ ಅಮೂಲ್ಯವಾದುದು. ರಸ್ತೆ ಸುರಕ್ಷತಾ ನಿಯಮಗಳ್ನು ಪಾಲಿಸುವ ಮೂಲಕ ಜೀವನದ ಅಮೂಲ್ಯ ಕ್ಷಣಗಳನ್ನು ಅನುಭವಿಸಿರಿ ಎಂದು ತುರುವನೂರು ಪೊಲೀಸ್ ಠಾಣೆಯ ಕರಿಬಸವರಾಜು ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಕೂನಬೇವು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ತೆರೆದ ಮನೆ ಕಾರ್ಯಕ್ರಮದಲ್ಲಿ ಅವರು ರಸ್ತೆ ಸುರಕ್ಷತಾ ಸಪ್ತಾಹದ ಅಡಿಯಲ್ಲಿ ರಸ್ತೆಯ ನಿಯಮಗಳನ್ನು ತಿಳಿಸಿದರು.
ಮಾದಕ ವಸ್ತುಗಳ ಬಳಕೆ ನಿಷೇಧ ಕಾನೂನಿನ ಸಂಪೂರ್ಣ ಮಾಹಿತಿಯನ್ನು ನೀಡಿ, ಮಾನವ ನರಮಂಡಲ ಸಂಪೂರ್ಣ ಹಾನಿಯಾಗಿ, ಅಪರಾಧ ಕೃತ್ಯ ಹೆಚ್ಚಾಗುತ್ತಿವೆ ಎಂದು ತಿಳಿಸಿದ ಅವರು, ಪೋಕ್ಸೊ ಕಾಯಿದೆ ಕುರಿತು ವಿಸ್ತಾರವಾಗಿ ಮಾಹಿತಿ ನೀಡಿದರು.
ಕೂನಬೇವು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಹನುಮಂತಪ್ಪ ಮಾತನಾಡಿ, ಮಕ್ಕಳು ಕಾನೂನುಗಳ ಅರಿವು ಪಡೆದುಕೊಂಡು ಉತ್ತಮ ಪ್ರಜೆಗಳಾಗಬೇಕು. ಮಾದಕ ವ್ಯಸನಗಳಾಗದೇ ಬಾಲ್ಯವಿವಾಹ ಮುಂತಾದ ದೌರ್ಜನ್ಯಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತುರುವನೂರು ಪೊಲೀಸ್ ಠಾಣೆಯ ಹಿರಿಯ ಪೊಲೀಸರಾದ ಟಿ.ಹೆಚ್.ತಳವಾರ್, ವೆಂಕಟೇಶ್ ಮತ್ತು ಶಾಲಾ ಸಿಬ್ಬಂದಿ ವರ್ಗದವರು ಇದ್ದರು.

