ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಪೋಲಿಯೋ ಮುಕ್ತ ಭಾರತದಂತೆಯೇ “ಪೋಲಿಯೋ ಮುಕ್ತ ಪ್ರಪಂಚ” ಮಾಡುವುದೇ ರೋಟರಿ ಸಂಸ್ಥೆಯ ಧ್ಯೇಯ ಎಂದು ಮಾಂಡವ್ಯ ರೋಟರಿ ಸಂಸ್ಥೆ ಅಧ್ಯಕ್ಷ ಅಶೋಕ್ ಹೇಳಿದರು.
ನಗರದಲ್ಲಿರುವ ಗುತ್ತಲು-ಅರಕೇಶ್ವರ ಬಡವಣೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಮಾಂಡವ್ಯ ರೋಟರಿ ಸಂಸ್ಥೆ, ಅನನ್ಯ ಹಾರ್ಟ್ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಲಸಿಕಾ ದಿನ-೨೦೨೫ರ ಪ್ರಯುಕ್ತ ಪಲ್ಸ್ ಪೋಲಿಯೋ ಜಾಗೃತಿ ಜಾಥಾ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಂಕ್ರಾಮಿಕ ರೋಗಗಳ ವಿರುದ್ಧದ ಹೋರಾಟದಲ್ಲಿ ಲಸಿಕೆಗಳು ಅತ್ಯಂತ ಶಕ್ತಿಶಾಲಿ ಸಾಧನಗಳಲ್ಲಿ ಒಂದಾಗಿವೆ ಅವು ನಮ್ಮನ್ನು, ನಮ್ಮ ಕುಟುಂಬಗಳನ್ನು ಮತ್ತು ನಮ್ಮ ಸಮುದಾಯಗಳನ್ನು ದೀರ್ಘಕಾಲೀನ ಆರೋಗ್ಯ ತೊಡಕುಗಳು ಮತ್ತು ಸಾವಿಗೆ ಕಾರಣವಾಗುವ ಹಾನಿಕಾರಕ ಕಾಯಿಲೆಗಳಿಂದ ರಕ್ಷಿಸುತ್ತವೆ ಎಂದು ನುಡಿದರು.
ಸೊನ್ನೆಯಿಂದ ೫ವರ್ಷದೊಳಗಿನ ಎಲ್ಲಾ ನವಜಾತಶಿಶು ಮತ್ತು ಮಕ್ಕಳಿಗೆ ಉಚಿತವಾಗಿ ಪಲ್ಸ್ ಪೋಲಿಯೋ ಹನಿಯನ್ನು ಹಾಕಿಸಿ, ಪೋಲಿಯೋ ಮುಕ್ತ ಭಾರತದಂತೆ ಪೋಲಿಯೋ ಮುಕ್ತ ಪ್ರಪಂಚವನ್ನಾಗಿಸುವುದೇ ರೋಟರಿ ಸಂಸ್ಥೆ ಪ್ರಮುಖ್ಯ ಧ್ಯೇಯವಾಗಿದೆ, ಎಲ್ಲರೂ ಸಹಕಾರ ನೀಡಿ ಎಂದು ಕೋರಿದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ೦-೫ ವರ್ಷದೊಳಗಿರುವ ಒಟ್ಟು ೧,೧೬,೭೨೪ಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ, ಪೋಷಕರು ನಿಗಧಿತ ಸ್ಥಳಕ್ಕೆ ತೆರಳಿ ಮಗುವಿಗೆ ಪೋಲಿಯೋ ಹನಿ ಹಾಕಿಸಿ, ಡಿ.೨೧ರಿಂದ ೨೪ ರವರೆಗೆ ಅಭಿಯಾನ ನಡೆಯಲಿದೆ, ಗ್ರಾಮೀಣ ಪ್ರದೇಶದಲ್ಲಿ ೩ ದಿನಗಳು & ನಗರ ಪ್ರದೇಶದಲ್ಲಿ ೪ ದಿನಗಳು ಹಮ್ಮಿಕೊಳ್ಳಲಾಗಿದೆ ಎಂದು ಸಲಹೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾ ತಂಬಾಕು ನಿಯಂತ್ರಣ ಕೋಶಾ ಸಂಚಾಲಕ ತಿಮ್ಮರಾಜು, ಭಾರತದಲ್ಲಿ ೧೯೯೫ ರಲ್ಲಿ ಪ್ರಾರಂಭವಾದ ಪಲ್ಸ್ ಪೋಲಿಯೊ ಇಮ್ಯುನೈಸೇಶನ್ ಕಾರ್ಯಕ್ರಮವು ವಿಶೇಷವಾಗಿ ಯಶಸ್ವಿಯಾಗಿದೆ. ಇದು ಪೋಲಿಯೊ ಮುಕ್ತ ಸ್ಥಿತಿಗೆ ಕಾರಣ ಮಾತ್ರವಲ್ಲದೆ, ದೇಶದಲ್ಲಿ ಬಲವಾದ ಲಸಿಕೆ ಮೂಲಸೌಕರ್ಯವನ್ನು ನಿರ್ಮಿಸಲು ಸಹಾಯ ಮಾಡಿದೆ, ಪೋಲಿಯೋ ಮುಕ್ತ ಭಾರತವಾಗಿದೆ ಎಂದು ತಿಳಿಸಿದರು.
೧೯೮೦ ರಲ್ಲಿ ಸಿಡುಬು ನಿರ್ಮೂಲನೆ ಮತ್ತು ನಂತರ ಅನೇಕ ದೇಶಗಳಿಂದ ಪೋಲಿಯೊ ನಿರ್ಮೂಲನೆ, ಜಾಗತಿಕ ಲಸಿಕೆ ಪ್ರಯತ್ನಗಳ ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿದೆ, ಮುಂದೆ ತಂಬಾಕು ಮುಕ್ತ ಪ್ರದೇಶ, ರಾಜ್ಯ, ರಾಷ್ಟ್ರ, ಪ್ರಪಂಚನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.
ಮಂಡ್ಯ ನಗರದಲ್ಲಿರುವ ಗುತ್ತಲು-ಅರಕೇಶ್ವರ ಬಡವಣೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಮಾಂಡವ್ಯ ರೋಟರಿ ಸಂಸ್ಥೆ, ಅನನ್ಯ ಹಾರ್ಟ್ ಸಂಸ್ಥೆ ಆಯೋಜಿಸಿದ್ದ ರಾಷ್ಟಿಯ ಲಸಿಕಾ ದಿನ-೨೦೨೫ರ ಪ್ರಯುಕ್ತ ಪಲ್ಸ್ ಪೋಲಿಯೋ ಜಾಗೃತಿ ಜಾಥಾ ಅಭಿಯಾನ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಮಾದೇವ್ ಬಂಡುಬೇರು, ಸಂಸ್ಥೆಯ ಕಾರ್ಯದರ್ಶಿ ಆದರ್ಶ ನಿರ್ದೇಶಕ ನಾಗೇಶ್, ಸಹ ಕಾರ್ಯದರ್ಶಿ ನವೀನ್ ಕುಮಾರ್, ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಬಸವೇಗೌಡ, ಕೃಷ್ಣೇಗೌಡ, ಮುಖ್ಯ ಶಿಕ್ಷಕಿ ರೇಣುಕಮ್ಮ, ಉಷಾರಾಣಿ, ಮಾಲತಿ ಹಾಗೂ ಮದ್ದೂರು ರೋಟೋರಿಯ ಅಧ್ಯಕ್ಷ ಶ್ರೀನಿವಾಸು ಇನ್ನುಮುಂತಾದ ಶಿಕ್ಷಕರು ಭಾಗವಹಿಸಿದ್ದರು.

