ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾನಗೆಟ್ಟ ಕರ್ನಾಟಕ ಬಿಜೆಪಿ ಪಕ್ಷದ ಮುಕ್ಕಾಲು ಪಾಲು ನಾಯಕರ ಮೇಲೆ ಭ್ರಷ್ಟಾಚಾರ, ಅನಾಚಾರದ ಪ್ರಕರಣಗಳಿವೆ ಎಂದು ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದೆ.
ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಹರಿಹಾಯ್ದಿದೆ.
ಹಲವು ಬಿಜೆಪಿ ನಾಯಕರ ಹಗರಣದ ತನಿಖೆ ಪ್ರಗತಿಯಲ್ಲಿದೆ, ಸಾಲು ಸಾಲು ಬಿಜೆಪಿ ನಾಯಕರು ಕೋರ್ಟಿನಲ್ಲಿ ಸಿಡಿಗೆ ತಡೆಯಾಜ್ಞೆ ತಂದು ಕಾನೂನಿನ ಮರೆಯಲ್ಲಿ ತಮ್ಮ ಮಾನ ಮುಚ್ಚಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಸ್ವತಃ ಬಿಜೆಪಿ ನಾಯಕರೇ ತಮ್ಮವರ ಭ್ರಷ್ಟಾಚಾರದ ಕತೆಗಳನ್ನು ಬಿಚ್ಚಿಟ್ಟಿದ್ದಾರೆ. ಇಂತಹ ಜಗತ್ತಿನ ಅತಿ ಭ್ರಷ್ಟ ರಾಜಕೀಯ ಪಕ್ಷವಾದ ಬಿಜೆಪಿ ಸಿದ್ದರಾಮಯ್ಯನವರ ವಿರುದ್ಧ ಪುರಾವೆ ಇಲ್ಲದ ಪ್ರಕರಣ ಇಟ್ಟುಕೊಂಡು ಮಾತಾಡುವುದು ಗೂಬೆಗಳು ತೋಡಿ ರಾಗ ಹಾಡಿದಂತೆಯೇ ಸರಿ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.