ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : 2023-24 ನೇ ಸಾಲಿನಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಬೆಳೆ ಸಾಲ ಒಟ್ಟು 104250 ರೈತರಿಗೆ ರೂ.1010.20 ಕೋಟಿ ಹಂಚಿಕೆ ಮಾಡಿದೆ. ಇದು ಶೇ.108.96 ರಷ್ಟು ಪ್ರಗತಿಯಾಗಿದೆದೆ. ಆಗಸ್ಟ್-24 ರ ಮಾಹೆಯ ಅಂತ್ಯದವರೆಗೆ ಒಟ್ಟು 37672 ರೈತರಿಗೆ ಒಟ್ಟು 417.85 ಕೋಟಿ ಸಾಲ ಹಂಚಿಕೆ ಮಾಡಲಾಗಿದ್ದು, ಸಾಲ ವಸೂಲಾತಿ ಶೇ 99.07 ರಷ್ಟಿದೆ ಎಂದು ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, 2023-24 ನೇ ಸಾಲಿನಲ್ಲಿ 1696 ಸ್ವ-ಸಹಾಯ ಸಂಘಗಳಿಗೆ ರೂ.73.33 ಕೋಟಿ ಸಾಲ ವಿತರಿಸಲಾಗಿದ್ದು, ಶೇ.100 ರಷ್ಟು ಪ್ರಗತಿಯಾಗಿದೆ. ಆಗಸ್ಟ್-24 ರ ಮಾಹೆಯ ಅಂತ್ಯದವರೆಗೆ ಒಟ್ಟು 680 ಸ್ವ-ಸಹಾಯ ಸಂಘಗಳಗೆ ರೂ.29.53 ಕೋಟಿ ಸಾಲ ಹಂಚಿಕೆ ಮಾಡಲಾಗಿದ್ದು, ಸಾಲ ವಸೂಲಾತಿ ಶೇ.99.00 ಇದೆ ಎಂದರು.
ಬ್ಯಾಂಕಿನ ಶಾಖೆಗಳ ಮೂಲಕ 15231 ವ್ಯಕ್ತಿಗಳಿಗೆ ಕೃಷಿಯೇತರ ಸಾಲ ರೂ. 519.16 ಕೋಟಿ ಸಾಲ
ನೀಡಲಾಗಿದ್ದು, ಸಾಲ ವಸೂಲಾತಿ ಶೇ.88.17 ಗಳಷ್ಟಿದ್ದು, ನಿವ್ವಳ ಎನ್.ಪಿ.ಎ ಪ್ರಮಾಣ ಶೇ.0.78 ಮಾತ್ರ ಇದೆ ಎಂದರು.
ರೈತರ ಹಾಗೂ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಯೋಜನೆಯ ರೀತ್ಯಾ ಮೊಬೈಲ್ ವಾಹನದ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಮೊಬೈಲ್ ವ್ಯಾನ್‌ನಲ್ಲಿ ಎ.ಟಿ.ಎಂ ನ್ನು ಅಳವಡಿಸಲಾಗಿದ್ದು, ಈಗಾಗಲೇ ಮೊಬೈಲ್ ವ್ಯಾನ್ ಜಿಲ್ಲೆಯ ಎಲ್ಲಾ ಹಳ್ಳಿ-ಹಳ್ಳಿಗಳಲ್ಲೂ ಸಂಚರಿಸುತ್ತಿದ್ದು, ಹಾಲು ಉತ್ಪಾದಕ ಸಂಘದ ಸದಸ್ಯರು ಹಾಗೂ ಗ್ರಾಹಕರು ನಮ್ಮ ಬ್ಯಾಂಕಿನ ಎ.ಟಿ.ಎಂ ಕಾರ್ಡ್ ಮುಖಾಂತರ ಹಣವನ್ನು ಡ್ರಾ ಮಾಡಬಹುದಾಗಿದೆ ಎಂದರು.
2023-24 ನೇ ಸಾಅನಲ್ಲಿ ಒಟ್ಟು ರೂ.17.99 ಕೋಟಿ ಲಾಭ, ರೂ.10.58 ಲಾಭಗಳಿಸಿದ್ದು, ಷೇರು ಬಂಡವಾಳ ರೂ.138.98 ಕೋಟಿ ಹಾಗೂ ನಿಧಿಗಳು ರೂ.67.46 ಕೋಟಿ ಕೋಟಿ ನಿವ್ವಳ ಹಾಗೂ ದುಡಿಯುವ ಬಂಡವಾಳ ರೂ.2332.29 ಕೋಟಿಗಳಾಗಿದೆ. ರೂ.1462.78 ಕೋಟಿ ಠೇವಣಿ ಸಂಗ್ರಹಣೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎಸ್ ಕೆ ಮರಿಯಪ್ಪ, ನಿರ್ದೇಶಕರಾ ಎಂ ಎಂ ಪರಮೇಶ್, ಸುಧೀರ್, ಹನುಮಂತು ಮೊದಲಾದವರಿದ್ದರು.