15.45 ಕೋಟಿ ರೂ. ಡಿಜಿಟಲ್ ಅರೆಸ್ಟ್ ವಂಚನೆ; ಹೈದರಾಬಾದ್‌ನಲ್ಲಿ ಇಬ್ಬರು ಆರೋಪಿಗಳ ಬಂಧನ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಗರದ ವೃದ್ಧ ಉದ್ಯಮಿಯೊಬ್ಬರಿಗೆ ಬರೋಬ್ಬರಿ 15.45 ಕೋಟಿ ರೂ. ವಂಚಿಸಿದ್ದ ಜಾಲವನ್ನು ಭೇದಿಸುವಲ್ಲಿ ಬೆಳಗಾವಿಯ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು
, ವಂಚಕರ ಖಾತೆಯಲ್ಲಿದ್ದ 1 ಕೋಟಿ ರೂ. ಹಣವನ್ನು ಫ್ರೀಜ್ ಮಾಡಲಾಗಿದೆ.

​ಬಂಧಿತ ಆರೋಪಿಗಳು-
​ವೆಂಕದೋತ್ ಶರತ್ ನಾಯಿಕ (ಹೈದರಾಬಾದ್), ​ದೇಗಾವತ ಶ್ರೀಪಾದ ನಾಯಿಕ (ಹೈದರಾಬಾದ್).

- Advertisement - 

​ವಂಚನೆಯ ಹಿನ್ನೆಲೆ: ಏನಿದು ಪ್ರಕರಣ?
​ಟಿಳಕವಾಡಿಯ ನಿವಾಸಿ
, ಉದ್ಯಮಿ ಅಜೀತ ಸರಾಫ್ ಅವರಿಗೆ ಕರೆ ಮಾಡಿದ್ದ ವಂಚಕರು, ತಾವು ತನಿಖಾ ಸಂಸ್ಥೆಯ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರು.

​ಬೆದರಿಕೆ: “ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್‌ಗಳ ಮೂಲಕ ಅಕ್ರಮ ಚಟುವಟಿಕೆ ನಡೆದಿದೆ. ನೀವು ಜೆಟ್ ಏರ್‌ವೇಸ್ ಮಾಜಿ ಸಿಇಒ ನರೇಶ್ ಗೋಯಲ್ ಅವರೊಂದಿಗೆ ಸಂಪರ್ಕದಲ್ಲಿದ್ದು, 25 ಲಕ್ಷ ರೂ. ಮನಿ ಲಾಂಡರಿಂಗ್ ಮಾಡಿ 5 ಲಕ್ಷ ರೂ. ಕಮಿಷನ್ ಪಡೆದಿದ್ದೀರಿ” ಎಂದು ಹೆದರಿಸಿದ್ದರು.

- Advertisement - 

​ಡಿಜಿಟಲ್ ಅರೆಸ್ಟ್: ನಿಮ್ಮನ್ನು ಬಂಧಿಸುತ್ತೇವೆ ಎಂದು ಬೆದರಿಸಿ, ಫೆಬ್ರವರಿ 7 ರಿಂದ ಮಾರ್ಚ್ 9 ರವರೆಗೆ ಹಂತಹಂತವಾಗಿ ಒಟ್ಟು 15.45 ಕೋಟಿ ರೂ. ಹಣವನ್ನು ಆರ್​ಟಿಜಿಎಸ್ ಮೂಲಕ ವರ್ಗಾಯಿಸಿಕೊಂಡಿದ್ದರು.

​ಪೊಲೀಸ್ ತನಿಖೆ ಮತ್ತು ಕಾರ್ಯಾಚರಣೆ-
​ಸೈಬರ್ ಅಪರಾಧ ಠಾಣೆಯ ಎಸಿಪಿ ಬಿ.ಎಸ್. ಮಂಟೂರ ಅವರ ಮಾರ್ಗದರ್ಶನದಲ್ಲಿ ಪಿಐ ಶ್ರೀಶೈಲ ಗಾಬಿ ನೇತೃತ್ವದ ತಂಡ ಹೈದರಾಬಾದ್‌ಗೆ ತೆರಳಿ ಆರೋಪಿಗಳನ್ನು ಸೆರೆಹಿಡಿದಿದೆ.

​ಹಣ ವರ್ಗಾವಣೆ: ಆರೋಪಿಗಳು ಕಂಪನಿಯ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು, ವಂಚನೆಯ ಹಣವನ್ನು ಗೋವಾ, ಹರಿಯಾಣ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ 10ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

​ಸಿಬಿಐ ತನಿಖೆಗೆ ಒಲವು: ಪ್ರಕರಣದ ಗಂಭೀರತೆ ಮತ್ತು ವಂಚನೆಯ ಮೊತ್ತ 10 ಕೋಟಿ ರೂ.ಗಿಂತ ಹೆಚ್ಚಿರುವುದರಿಂದ, ಇದನ್ನು ಸಿಬಿಐ ತನಿಖೆಗೆ ವಹಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

​ಪೊಲೀಸ್ ಆಯುಕ್ತರ ಹೇಳಿಕೆ:
“ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಇವರ ಜೊತೆ ಇನ್ನೂ ಇಬ್ಬರು ಶಾಮೀಲಾಗಿದ್ದು
, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕ್ ಖಾತೆ ನೀಡಿದವರ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು. ಪ್ರಕರಣದ ಕುರಿತು ಸಿಬಿಐ ಜೊತೆ ಪತ್ರ ವ್ಯವಹಾರ ನಡೆಸುತ್ತಿದ್ದೇವೆ.”
ಭೂಷಣ ಬೊರಸೆ
, ಪೊಲೀಸ್ ಆಯುಕ್ತರು, ಬೆಳಗಾವಿ.

​ಸಾರ್ವಜನಿಕರಿಗೆ ಎಚ್ಚರಿಕೆ: ಯಾವುದೇ ಸರ್ಕಾರಿ ಸಂಸ್ಥೆ ಅಥವಾ ಪೊಲೀಸ್ ಅಧಿಕಾರಿಗಳು ವಿಡಿಯೋ ಕರೆ ಮೂಲಕ ಯಾರನ್ನೂ ಡಿಜಿಟಲ್ ಅರೆಸ್ಟ್ಮಾಡುವುದಿಲ್ಲ. ಇಂತಹ ಕರೆಗಳು ಬಂದರೆ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ಅಥವಾ ಸೈಬರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ.

 

 

Share This Article
error: Content is protected !!
";