“ಆರ್‌ಟಿಐ ಬ್ರಹ್ಮಾಸ್ತ್ರ:  ಬ್ಲಾಕ್‌ಮೇಲ್ ದಂಧೆಯ ಹೊಸ ಮುಖವಾಡ ನಗ್ನ ಸತ್ಯ ಅನಾವರಣ”

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ಆರ್‌ಟಿಐ ಬ್ರಹ್ಮಾಸ್ತ್ರ:  ಬ್ಲಾಕ್‌ಮೇಲ್ ದಂಧೆಯ ಹೊಸ ಮುಖವಾಡ ನಗ್ನ ಸತ್ಯ ಅನಾವರಣ “.
ನಗ್ನ ಸತ್ಯ ಏನು
ಮಾಹಿತಿ ಹಕ್ಕುನಾಅಥವಾ ಹಣದ ದಂಧೆಯಾ?
ಆರ್‌ಟಿಐ ಬ್ರಹ್ಮಾಸ್ತ್ರದಿಂದ ಸತ್ಯ ಅನಾವರಣವಾಗ್ತಿದೆಯಾ
ಅಥವಾ ಭಯದ ವ್ಯಾಪಾರ ನಡೆಯ್ತಿದೆಯಾ?.

ಭ್ರಷ್ಟಾಚಾರ ಬಯಲುಗೊಳಿಸುವ ಶಕ್ತಿಯೇಅಥವಾ ಬ್ಲಾಕ್‌ಮೇಲ್ ಆಯುಧವೇ?. ನ್ಯಾಯಕ್ಕಾಗಿ ಹೋರಾಟವಾಅಥವಾ ಸೆಟ್ಲ್‌ಮೆಂಟ್ ಸಂಸ್ಕೃತಿಯ ಹೊಸ ಮುಖವಾ?. ಜನರ ಹಕ್ಕು ಉಳಿಯುತ್ತಿದೆಯಾ…..?. ಕೆಲವರ ಕೈಯಲ್ಲಿ ಲೂಟಿ ಸಾಧನವಾಗ್ತಿರುವ ನಗ್ನ ಸತ್ಯ ಅನಾವರಣ……..

- Advertisement - 

ಮಾಹಿತಿ ಹಕ್ಕು ಕಾಯಿದೆ ದೇಶದ ಪ್ರಜಾಪ್ರಭುತ್ವಕ್ಕೆ ನೀಡಿದ ಅಪ್ರತಿಮ ಶಕ್ತಿ. ಇದು ಸಾಮಾನ್ಯ ನಾಗರಿಕನ ಕೈಯಲ್ಲಿ ಸತ್ಯವನ್ನು ಹೊರತೆಗೆದ ಬ್ರಹ್ಮಾಸ್ತ್ರ. ಅನೇಕ ಹಗರಣಗಳು, ಅನ್ಯಾಯಗಳು ಮತ್ತು ಆಡಳಿತದ ಅಕ್ರಮಗಳು ಈ ಕಾಯಿದೆಯ ಮೂಲಕವೇ ನಗ್ನ ಸತ್ಯವಾಗಿ ಹೊರಬಿದ್ದಿವೆ. ಇದು ಆರ್‌ಟಿಐಯ ಸತ್ಯಮುಖ.

ಆದರೆ ಇದೇ ಸಮಯದಲ್ಲಿ ಮತ್ತೊಂದು ನಗ್ನ ಸತ್ಯವೂ ಅನಾವರಣಗೊಳ್ಳುತ್ತಿದೆ. ಬ್ರಹ್ಮಾಸ್ತ್ರವನ್ನು ಕೆಲವರು ಬ್ಲಾಕ್‌ಮೇಲ್ ತಂತ್ರವಾಗಿ ಬಳಸುತ್ತಿರುವುದು.

- Advertisement - 

ಇಂದು ಕೆಲ ಸ್ವಯಂಘೋಷಿತ ಆರ್‌ಟಿಐ ಕಾರ್ಯಕರ್ತರು ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂಬ ಹೆಸರಿನಲ್ಲಿ ಅರ್ಜಿಗಳನ್ನು ಹಾಕಿ, ನಂತರ ಅದನ್ನೇ ಹಣದ ದಂಧೆಗೆ ಬಳಸುತ್ತಿರುವ ಆರೋಪಗಳು ಹೆಚ್ಚುತ್ತಿವೆ. ರಾಜಕಾರಣಿಗಳು, ಗುತ್ತಿಗೆದಾರರು ಮತ್ತು ಉನ್ನತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಉದ್ದೇಶಪೂರ್ವಕವಾಗಿ ಜಟಿಲ ಮಾಹಿತಿಗೆ ಅರ್ಜಿ ಹಾಕುವುದು, ಸಣ್ಣ ತಪ್ಪುಗಳನ್ನು ದೊಡ್ಡ ಭ್ರಷ್ಟಾಚಾರವೆಂದು ತೋರಿಸುವುದು, ನಂತರ ತನಿಖೆ ಮತ್ತು ನೋಟಿಸ್ ಭೀತಿ ಸೃಷ್ಟಿಸಿ ಸಮರಸತೆಹೆಸರಿನಲ್ಲಿ ಹಣದ ಬೇಡಿಕೆ ಇಡುವುದುಇದು ಒಂದು ಹೊಸ ರೀತಿಯ ಒತ್ತಡ ತಂತ್ರವಾಗಿದೆ.

ಮಾಹಿತಿ ಬೇಡವಿಷಯ ಸರಿ ಮಾಡಿಕೊಳ್ಳಿಎಂಬ ಗುಪ್ತ ಸಂದೇಶದ ಹಿಂದೆ ಲಕ್ಷಗಳಿಂದ ಕೋಟಿಗಳವರೆಗೆ ಹಣದ ವ್ಯವಹಾರ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಈ ಪ್ರವೃತ್ತಿ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕುಂದಿಸುತ್ತಿದ್ದು, ನಿಜವಾದ ಹೋರಾಟಗಾರರ ಗೌರವಕ್ಕೂ ಧಕ್ಕೆಯಾಗುತ್ತಿದೆ.

ಇಲ್ಲಿ ಸ್ಪಷ್ಟವಾಗಿ ಹೇಳಬೇಕಾದ ನಗ್ನ ಸತ್ಯ ಏನೆಂದರೆ-
ಆರ್‌ಟಿಐ ಒಂದು ಶಕ್ತಿ
, ಆದರೆ ಅದನ್ನು ಬಳಸುವ ವ್ಯಕ್ತಿಯ ಉದ್ದೇಶವೇ ಅದರ ದಿಕ್ಕನ್ನು ನಿರ್ಧರಿಸುತ್ತದೆ.

ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದು ಅನಿವಾರ್ಯ. ಸತ್ಯ ಅನಾವರಣ ಮಾಡುವುದು ಪ್ರಜಾಪ್ರಭುತ್ವದ ಆತ್ಮ. ಆದರೆ ಅದೇ ಹೆಸರಿನಲ್ಲಿ ಬ್ಲಾಕ್‌ಮೇಲ್ ದಂಧೆ ನಡೆಸುವುದು ನ್ಯಾಯವಲ್ಲಅದು ಕಾನೂನಿನ ಅವಮಾನ. ಆದ್ದರಿಂದ, ಈಗ ಸಮಯ ಬಂದಿದೆ. ಆರ್‌ಟಿಐ ಬ್ರಹ್ಮಾಸ್ತ್ರದ ದುರುಪಯೋಗದ ವಿರುದ್ಧ ಧ್ವನಿ ಎತ್ತಲು.
ಈ ಧ್ವನಿ ಯಾರ ವಿರುದ್ಧ
?. ಕಾಯಿದೆಯ ವಿರುದ್ಧ ಅಲ್ಲ. ಕಾಯಿದೆಯನ್ನು ದುರುಪಯೋಗಪಡಿಸುವ ಮನೋಭಾವದ ವಿರುದ್ಧ. ಸರ್ಕಾರವು ದುರುಪಯೋಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಮಾಹಿತಿಯನ್ನು ಸ್ವಯಂ ಬಹಿರಂಗಪಡಿಸುವ ವ್ಯವಸ್ಥೆಯನ್ನು ಬಲಪಡಿಸಬೇಕು. ಜನರಲ್ಲಿ ಸರಿಯಾದ ಬಳಕೆಯ ಅರಿವು ಮೂಡಿಸಬೇಕು. ಸತ್ಯಸಂಧ ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕು.

ಅಧಿಕಾರಿಗಳೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿದರೆ, ಇಂತಹ ಬ್ಲಾಕ್‌ಮೇಲ್ ತಂತ್ರಗಳಿಗೆ ಅವಕಾಶವೇ ಇರುವುದಿಲ್ಲ.

ಅಂತಿಮವಾಗಿ, ಆರ್‌ಟಿಐ ಬ್ರಹ್ಮಾಸ್ತ್ರ ಸತ್ಯ ಅನಾವರಣಕ್ಕೆ ಬಳಸಿದರೆ ಅದು ಜನಶಕ್ತಿ. ಬ್ಲಾಕ್‌ಮೇಲ್‌ಗೆ ಬಳಸಿದರೆ ಅದು ಸಮಾಜದ ಶತ್ರು. ನಗ್ನ ಸತ್ಯ ಅನಾವರಣಗೊಳ್ಳಬೇಕು. ಆದರೆ ಅದೇ ಸತ್ಯದ ಹೆಸರಿನಲ್ಲಿ ದಂಧೆ ನಡೆಯಬಾರದು. ಇದೇ ನಮ್ಮ ಧ್ವನಿ. ಇದೇ ಪ್ರಜಾಪ್ರಭುತ್ವದ ರಕ್ಷಣೆ.       ಲೇಖನ-ಶ್ರೀನಿವಾಸ್ ಕೆ ಟಿ, ಬೆಂಗಳೂರು.

 

 

 

Share This Article
error: Content is protected !!
";