ಗ್ರಾಪಂ ಅಧ್ಯಕ್ಷರಾಗಿ ರುದ್ರಾಣಮ್ಮ ಅವಿರೋಧ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲೂಕಿನ ಮಜರಾಹೊಸಹಳ್ಳಿಪಂಚಾಯತಿ ಅಧ್ಯಕ್ಷರ ಚುನಾವಣೆ ನಡೆದಿದ್ದು
  ನೂತನ ಅಧ್ಯಕ್ಷರಾಗಿ ಕೆ ಸಿ ರುದ್ರಾಣಮ್ಮ ಮಂಜುನಾಥ್  ಅವಿರೋಧವಾಗಿ ಆಯ್ಕೆಯಾಗಿದ್ದಾರೆ .

- Advertisement - 

 18 ಸದಸ್ಯರ ಬಲ ಹೊಂದಿರುವ ಮಜರಾ ಹೊಸಹಳ್ಳಿ ಪಂಚಾಯಿತಿಯಲ್ಲಿ ಇಂದು ಅಧ್ಯಕ್ಷ  ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೆ ಸಿ ರುದ್ರಾಣಮ್ಮ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

- Advertisement - 

 ನೂತನ ಅಧ್ಯಕ್ಷರಿಗೆ ಪುಷ್ಪಮಾಲೆ ನೀಡಿ ಸಿಹಿ ತಿನಿಸುವ ಮೂಲಕ ಸದಸ್ಯರು, ಸರ್ವ ಪಕ್ಷಗಳ ಮುಖಂಡರು ಶುಭ ಕೋರಿದರು. ಪಟಾಕಿ ಸಿಡಿಸುವ ಮೂಲಕ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.

 ನೂತನ ಅಧ್ಯಕ್ಷರಿಗೆ ಸ್ಥಳೀಯ ಮುಖಂಡರಾದ ಮಾಜಿ ಎಪಿಎಂಸಿ ಅಧ್ಯಕ್ಷ ತಿ.ರಂಗರಾಜು, ಬಮೂಲ್ ನಿರ್ದೇಶಕ ಬಿ ಸಿ ಆನಂದ್ ಕುಮಾರ್ ಸೇರಿದಂತೆ ಹಲವು ಗಣ್ಯರು  ಶುಭ ಹಾರೈಸಿದ್ದಾರೆ. 

- Advertisement - 

ನೂತನ ಅಧ್ಯಕ್ಷರಾದ ರುದ್ರಾಣಮ್ಮ ಮಂಜುನಾಥ್  ಮಾತನಾಡಿ ಸರ್ವ ಸದಸ್ಯರು  ಒಮ್ಮತದಿಂದ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ , ನನಗೆ ಸಿಕ್ಕಿರುವ ಈ ಅವಕಾಶವನ್ನು ಉಪಯೋಗಿಸಿಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳ ಕೊರತೆ ಬಾರದಂತೆ ಸಾಧ್ಯವಾದಷ್ಟು ಉನ್ನತ ಮಟ್ಟದಲ್ಲಿ ಶ್ರಮಿಸುತ್ತೇನೆ     ಇದೇ ಮೊದಲ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂಬ ಹಂಬಲವಿದೆ, ಸರ್ವ ಸದಸ್ಯರ  ಸಲಹೆ ಸೂಚನೆಗಳನ್ನು ಪಡೆದು  ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.

 

Share This Article
error: Content is protected !!
";