ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
5ನೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯೋಗ ಚಾಂಪಿಯನ್ಶಿಪ್-2025 ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದಲ್ಲಿ ಜಿಲ್ಲಾ ಅಮೆಚೂರ್ ಯೋಗಾಸನ ಅಸೋಸಿಯೇಷನ್ಅಧ್ಯಕ್ಷರಾದ ಪ್ರೊಫೆಸರ್ ಎಂ.ಜಿ. ಅಮರ್ನಾಥ್ ಉದ್ಘಾಟಿಸಿ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಡಿ ಆರ್ ವೇಣುಗೋಪಾಲ್ ವೀಣಾಅಮರನಾಥ್ ಆಶಾ ದೇವಾನಂದ್ ನಿಖಿಲ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಶರಾವತಿ ಮೇಡಂ ಕೂರ್ಮಾಸನ ತಜ್ಞ ಎಚ್ಎಸ್ ರಾಮಕೃಷ್ಣ ಕರ್ನಾಟಕ ಅಮೆಚೂರ್ ಯೋಗ ಸಂಸ್ಥೆಯ ಕಾರ್ಯದರ್ಶಿ ನಟರಾಜ್, ಉಪಾಧ್ಯಕ್ಷ ಕೆ.ಆರ್. ಶಾಮ್ ಸುಂದರ್ ಭಾಗವಹಿಸಿದ್ದರು.

