ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹಬ್ಬದ ಋತುವಿನಲ್ಲಿ ಹೆಚ್ಚಿನ ದಟ್ಟಣೆಯನ್ನು ಸರಿದೂಗಿಸಲು, ದಕ್ಷಿಣ ರೈಲ್ವೆಯು ಈಗಾಗಲೇ ಎರ್ನಾಕುಲಂ ಮತ್ತು ಯಲಹಂಕ ನಿಲ್ದಾಣಗಳ ನಡುವೆ ಓಡಿಸಲಾಗುತ್ತಿದ್ದ ವಿಶೇಷ ರೈಲುಗಳ ಸೇವೆಯನ್ನು ಹೆಚ್ಚುವರಿ ನಾಲ್ಕು ಟ್ರಿಪ್ಗಳಿಗೆ ವಿಸ್ತರಿಸಲು ಸೂಚಿಸಿದೆ.
ರೈಲುಗಳ ವಿವರಗಳು-
1) ರೈಲು ಸಂಖ್ಯೆ 06101 ಎರ್ನಾಕುಲಂ-ಯಲಹಂಕ ಟ್ರೈ-ವೀಕ್ಲಿ ಎಕ್ಸ್ ಪ್ರೆಸ್ ವಿಶೇಷ ರೈಲನ್ನು ಈ ಹಿಂದೆ ಸೆಪ್ಟೆಂಬರ್ 18 ರವರೆಗೆ ಓಡಿಸಲು ಸೂಚಿಸಲಾಗಿತ್ತು, ಈಗ ನಾಲ್ಕು ಹೆಚ್ಚುವರಿ ಟ್ರಿಪ್ಗಳೊಂದಿಗೆ ಸಪ್ಟೆಂಬರ್ 22 ರಿಂದ 29, 2024 ರವರೆಗೆ ವಿಸ್ತರಿಸಲಾಗಿದೆ.
2) ರೈಲು ಸಂಖ್ಯೆ 06102 ಯಲಹಂಕ-ಎರ್ನಾಕುಲಂ ಟ್ರೈ-ವೀಕ್ಲಿ ಎಕ್ಸ್ ಪ್ರೆಸ್ ವಿಶೇಷ ರೈಲುನ್ನು ಈ ಹಿಂದೆ ಸೆಪ್ಟೆಂಬರ್ 19 ರವರೆಗೆ ಓಡಿಸಲು ಸೂಚಿಸಲಾಗಿತ್ತು, ಈಗ ನಾಲ್ಕು ಹೆಚ್ಚುವರಿ ಟ್ರಿಪ್ಗಳಿಗಾಗಿ ಸೆಪ್ಟೆಂಬರ್ 23 ರಿಂದ 30 ರವರೆಗೆ ವಿಸ್ತರಿಸಲಾಗಿದೆ.
ಅಸ್ತಿತ್ವದಲ್ಲಿರುವ ಸಮಯ ಮತ್ತು ನಿಲುಗಡೆಗಳ ಪ್ರಕಾರ ಈ ರೈಲುಗಳು ಚಲಿಸುವುದನ್ನು ಮುಂದುವರಿಸಲಾಗಿದೆ.