ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ಎಸ್.ಎಂ. ಕೃಷ್ಣ ನಗರದಲ್ಲಿ ಉಪಚುನಾವಣೆಯ ಅಂಗವಾಗಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಅವರ ಪರವಾಗಿ ಭರ್ಜರಿ ಮತಯಾಚನೆ ನಡೆಸಲಾಯಿತು. ಮನೆ ಮನೆಗೆ ತೆರಳಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷದ ಸಾಧನೆಗಳನ್ನು ವಿವರಿಸಿ, ಕಮಲದ ಗುರುತಿಗೆ ಮತ ನೀಡುವಂತೆ ಮನವಿ ಮಾಡಿದರು.
ಹಣಬಲ ವರ್ಸಸ್ ಜನಬಲದ ಹೋರಾಟ-
ಪ್ರಚಾರದ ವೇಳೆ ಮಾತನಾಡಿದ ಮುಖಂಡರು, ಈ ಬಾರಿಯ ಚುನಾವಣೆ ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ. ಇದು ಹಣಬಲ ಮತ್ತು ಜನಬಲದ ನಡುವಿನ ಹೋರಾಟ. ಹಾಗೆಯೇ ಆಡಳಿತಾರೂಢರ ಅಧಿಕಾರಬಲ ಮತ್ತು ಜನರ ವಿಶ್ವಾಸದ ನಡುವಿನ ಸಂಘರ್ಷವಾಗಿದೆ ಎಂದು ಬಣ್ಣಿಸಿದರು.
”ಬಿಜೆಪಿ ಯಾವಾಗಲೂ ನೀತಿಯ ಪರವಾಗಿ ಮತ್ತು ಬಡವರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಾ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನರು ಕಂಗೆಟ್ಟಿದ್ದಾರೆ,” ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆ ವಿರುದ್ಧ ವಾಗ್ದಾಳಿ-
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ದಿನಬಳಕೆಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುವ ಮೂಲಕ ಬಡವರ ಬದುಕನ್ನು ದುಸ್ಥಿತಿಗೆ ತಳ್ಳಿದೆ. ಕಾಂಗ್ರೆಸ್‌ನ ಈ ಜನವಿರೋಧಿ ನೀತಿಗಳಿಗೆ ಈ ಉಪಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಪ್ರಚಾರದ ವೇಳೆ ವಿಶ್ವಾಸ ವ್ಯಕ್ತಪಡಿಸಲಾಯಿತು.
ಈ ಮತಯಾಚನಾ ಸಂದರ್ಭದಲ್ಲಿ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರ ದೊಡ್ಡ ಪಡೆಯೇ ಸಾಥ್ ನೀಡಿತ್ತು.
ಯಶವಂತರಾವ್ ಜಾಧಬ್ (ಸ್ಥಳೀಯ ಬಿಜೆಪಿ ಮುಖಂಡರು). ರಾಜನಹಳ್ಳಿ ಶಿವಕುಮಾರ್, ಕೃಷ್ಣಮೂರ್ತಿ ಪಾವರ್, ಜಯಮ್ಮ (ಮಾಜಿ ಮಹಾಪೌರರು)ಇವರೊಂದಿಗೆ ಪಕ್ಷದ ವಿವಿಧ ಹಂತದ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಿದರು.

