ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ವಿಕಾಸ ರಂಗದ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾಗಿ ಎಸ್.ನಟರಾಜ್ ಅವರನ್ನ ಆಯ್ಕೆ ಮಾಡಲಾಗಿದೆ.
ಕರ್ನಾಟಕ ವಿಕಾಸರಂಗದ ರಾಜ್ಯಾಧ್ಯಕ್ಷ ಹಾಗೂ ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಕಾರ್ಯದರ್ಶಿ ವ.ಚ.ಚನ್ನೇಗೌಡರ ನೇತೃತ್ವದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಸಂವರ್ಧನೆಗಾಗಿ ನೆಲ-ಜಲದ ರಕ್ಷಣೆಗಾಗಿ ಶ್ರಮಿಸುವ ಧ್ಯೇಯೋದ್ದೇಶಗಳೊಂದಿಗೆ ರಾಜ್ಯಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದಿದ್ದು,
ಚಿತ್ರದುರ್ಗ ಜಿಲ್ಲೆಗೆ ಕನ್ನಡಾಭಿಮಾನಿ, ಪಬ್ಲಿಕ್ ಹೀರೋ, ಹೆಮ್ಮೆಯ ಕನ್ನಡಿಗ ಕ.ರಾ.ರ.ಸಾ ನಿಗಮದ ಉತೃಷ್ಕ ಸೇವಾ ಪುರಸ್ಕಾರ ಪಡೆದ ರಕ್ತದಾನಿ ನಟರಾಜ್.ಎಸ್ ರವರನ್ನು ಕರ್ನಾಟಕ ವಿಕಾಸರಂಗದ ಧ್ಯೇಯೋದ್ದೇಸಕ್ಕೆ ಶಕ್ತಿ ತುಂಬುವ ವಿಶ್ವಾಸದಿಂದ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ಕರ್ನಾಟಕ ವಿಕಾಸರಂಗದ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ತಿಳಿಸಿದ್ದಾರೆ.