ಕೃಷಿ ವಿವಿಯಿಂದ ಮೂರು ಚಿನ್ನದ ಪದಕ ಪಡೆದ ಎಸ್.ಆರ್. ಶೀತಲ್
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಕನ್ವೆಷನ್ ಸೆಂಟರ್‌ನಲ್ಲಿ ಮೇ ೧೫ರಂದು ನಡೆದ ೫೯ನೇ ಘಟಿಕೋತ್ಸವದಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿದರಕೆರೆ ಗ್ರಾಮದ ಎಸ್.ಬಿ.ರುದ್ರಕುಮಾರ್ ಇವರ ಪುತ್ರಿ ಎಸ್.ಆರ್. ಶೀತಲ್ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
೨೦೨೩-೨೪ನೇ ಸಾಲಿನಲ್ಲಿ ೧೦,೦೦೦ ಅಂಕಗಳಿಗೆ ಸರಾಸರಿ ೯.೧೦೪ ಅಂಕಗಳನ್ನು ಗಳಿಸಿ ಪ್ರಥಮ ಶ್ರೇಯಾಂಕಿತರಾಗಿರುವ ಎಸ್.ಆರ್. ಶೀತಲ್ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಿಂದ ಕೊಡ ಮಾಡುವ ಕೃಷಿ ವಿಶ್ವವಿದ್ಯಾನಿಲಯದ ಚಿನ್ನದ ಪದಕ, ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್ ಚಿನ್ನದ ಪದಕ ಹಾಗೂ ಡಾ.ಆರ್.ರಾಮಯ್ಯ ಚಿನ್ನದ ಪದಕಗಳನ್ನು ಪಡೆದಿದ್ದಾರೆ.