ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂದು ಶಬರಿ ಕಾದಿದ್ದದ್ದು ಇದೆ ಭಾಗ್ಯಕ್ಕೆ…ಪ್ರೇಮ ಅಂದರೆ ಅರ್ಪಣೆ, ಪರಸ್ಪರ ನಾನು ಎಂಬುದಿಲ್ಲದ ಏಕತ್ವ ಭಾವ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.
ಹರ್ಯಾಣದ ರಾಂಪಾಲ್ ಕಶ್ಯಪ್ ಎಂಬವರು ಮೋದಿ ಅವರನ್ನು ಪ್ರಧಾನಿಯಾಗಿ ನೋಡುವವರೆಗೂ (ಭೇಟಿ) ಬರಿಗಾಲಲ್ಲೇ ಇರುತ್ತೇನೆ ಅಂತ ಪ್ರಮಾಣ ಮಾಡಿಕೊಂಡಿದ್ದರು.
ತಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಕಣ್ ತುಂಬಿಸಿಕೊಂಡರು. ಮೋದಿ ಅವರೂ ಹೊಸ ಪಾದರಕ್ಷೆಯನ್ನು ಅವರಿಗೆ ಕೊಟ್ಟು ಲೇಸ್ ಕಟ್ಟಲು ಬಾಗಿ ತಮ್ಮ ಪ್ರೀತಿ ವ್ಯಕ್ತಪಡಿಸಿದರು.
ಇಂಥ ಆಪ್ತತೆ, ಜೀವಪರ ಪ್ರೀತಿ, ಆತ್ಮೀಯತೆ ದೇಶದ ಪ್ರಧಾನಿಯಿಂದ ನೋಡುವ ಭಾಗ್ಯ ನಮ್ಮದು ಎಂದು ಸಿಟಿ ರವಿ ಹರ್ಷ ವ್ಯಕ್ತಪಡಿಸಿದ್ದಾರೆ.