ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ತಾಲೂಕಿನ ಗಡಿ ಗ್ರಾಮ ಖಾನಾಮಡಗು ಗ್ರಾಮದಲ್ಲಿ ಸುಮಾರು 5 ರಿಂದ 6 ರೈತರ ಜಮೀನುಗಳಿಗೆ ರಾತ್ರಿ ಸಮಯದಲ್ಲಿ ಕರಡಿ ಮತ್ತು ಹಂದಿಗಳ ದಾಳಿಯಿಂದ ಫಸಲಿಗೆ ಬಂದ ಮೆಕ್ಕೆಜೋಳ ಬೆಳೆಯನ್ನು ಹಾಳು ಮಾಡಿ ತೆನೆಗಳನ್ನು ತಿನ್ನುತ್ತವೆ ಹೀಗಾಗಿ ರೈತರು ರಾತ್ರಿ ಪೂರ್ತಿ ಹೊಲವನ್ನು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.
ಕಾನಾಮಾಡಗು ಗ್ರಾಮವು ಗಡಿ ಗ್ರಾಮ, ಆದರಿಂದ ಪಕ್ಕದ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಅರಣ್ಯ ಪ್ರದೇಶದ ಸಮೀಪ ಇರುವುದರಿಂದ ಕಾಡು ಪ್ರಾಣಿಗಳು ರಾತ್ರಿ ವೇಳೆ ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ಮೆಕ್ಕೆಜೋಳ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಇದ್ದೇವೆ. ಇದರಿಂದ ರೈತ ತುಂಬಾ ಸಂಕಷ್ಟಕ್ಕೀಡಾಗಿದ್ದು ಸಾಲ ಸೋಲ ಮಾಡಿ ಬೇಸಾಯ ಬೀಜ ಮತ್ತು.
ಗೊಬ್ಬರ ತಂದು ತಮ್ಮ ಹೊಲದಲ್ಲಿ ಬಿತ್ತನೆ ಮಾಡಿದ್ದೇವೆ ಆದರೆ. ನಮ್ಮ ಸುತ್ತಮುತ್ತಲಿನ ಗ್ರಾಮದ ಜಮೀನುಗಳಲ್ಲಿ ಕರಳಿಗಳು ಕಾಡಂದಿಗಳು. ನುಗ್ಗುತ್ತವೆ ಇದರಿಂದ ನಮಗೆ ತುಂಬಾ ನಷ್ಟ ಉಂಟಾಗಿದೆ ಎಂದು ರೈತ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಾವು ರಾತ್ರಿ ಹೊತ್ತು ನಮ್ಮ ಹೊಲಗಳಿಗೆ ಹೋಗಿ ಕಾಯುವುದಕ್ಕೆ ನಮಗೆ ತುಂಬಾ ಭಯವಾಗಿದೆ. ಯಾವುದೇ ಕ್ಷಣದಲ್ಲಾದರೂ ಕಾಡು ಪ್ರಾಣಿಗಳು ರೈತರ ಮೇಲೆ ದಾಳಿ ಮಾಡುವ ಸಭಾವವಿದೆ.
ಕೈಗೆ ಬಂದು ತುತ್ತು. ಬಾಯಿಗೆ ಬರದಂತಾಗಿದೆ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು ಎಂದು ಸಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

