ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿರುವ ಶ್ರೀ ಸಾಯಿ ಮಂಡಳಿಯ ಸಾಯಿಮಂದಿರ ಸಾಯಿಬಾಭರವರ ಮೂಲ ಪಾದುಕೆ ದರ್ಶನ ಉತ್ಸವವನ್ನ ಇಂದು ಮತ್ತು ನಾಳೆ ಏರ್ಪಡಿಸಿದೆ.
ಶಿರಡಿಯಿಂದ ಆಗಮಿಸಿದ ಪಾಡುಕೆಗಳನ್ನ ಮಲ್ಲೇಶ್ವರಂ ಪದವಿಪೂರ್ವ ಶಿಕ್ಷಣ ಇಲಾಖೆ ಸನಿಹದಿಂದ 14 ನೇ ತಿರುವಿನಲ್ಲಿರುವ ಸಾಯಿ ಮಂದಿರಕ್ಕೆ ಉತ್ಸವ ಮೆರವಣಿಗೆ ಮುಖಾಂತರ ತಂದು ಸಾರ್ವಜನಿಕ ಭಕ್ತರ ದರ್ಶನಕ್ಕೆ ಬೆಳಿಗ್ಗೆ 6 ರಿಂದ ರಾತ್ರಿ 10ರವರೆಗೆ ಇಡಲಾಗಿದೆ.
ಸಾವಿರಾರು ಭಕ್ತರು ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಬಾಬಾರವರ ಪಾದುಕೆ ದರ್ಶನ ಪಡೆಯುತ್ತಿದ್ದಾರೆ ಅನೇಕ ಗಣ್ಯರು ಸಹ ಆಗಮಿಸಿ ದರ್ಶನ ಪಡೆದರು ಇಂದು ಮತ್ತು ನಾಳೆಯವರೆಗೆ ಎರಡು ಲಕ್ಷ ಭಕ್ತರು ದರ್ಶನ ಪಡೆಯುವ ನಿರೀಕ್ಷೆ ಇದೆ.
ಶಿರಡಿ ಸಂಸ್ಥಾನದ ಸಿ ಇ ಓ ಗೋರಕ್ಷ ಗಡಿಲ್ಕರ್ ಅಲ್ಲಿನ ಮಾಧ್ಯಮ ಸಿಬ್ಬಂದಿ, ಅರ್ಚಕರು ಸೇರಿದಂತೆ 25 ಜನ ಸಿಬ್ಬಂದಿ ಇಲ್ಲೇ ಬಿಡು ಬಿಟ್ಟಿದ್ದಾರೆ. ಹಿರಿಯ ನಾಗರಿಕರಿಗೆ ವಿಶೇಷ ಪ್ರವೇಶ ಕಲ್ಪಿಸಲಾಗಿದೆ ಎಂದು ಸಾಯಿ ಮಂಡಳಿ ಅಧ್ಯಕ್ಷ ಡಾ. ಕೆ ನಾಗೇಶ್ ಮತ್ತು ಗೌ. ಕಾರ್ಯದರ್ಶಿ ಪ್ರಕಾಶ್ ರಾವ್ ತಿಳಿಸಿದರು.
ಭಕ್ತರಿಗೆ ಕುಡಿಯುವ ನೀರು ಪ್ರಸಾದ, ತುರ್ತು ಚಿಕಿತ್ಸೆ, ಆಂಬುಲೆನ್ಸ್ ಮತ್ತು ಅನಾಹುತಗಳು ಆಗದಂತೆ ಎಲ್ಲಾ ವ್ಯವಸ್ಥೆಯನ್ನ ಅಚ್ಚುಕಟ್ಟಾಗಿ ಮಾಡಲಾಗಿದೆ.