ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಯಿ ಆದ್ಯಾತ್ಮಿಕ ಕೇಂದ್ರ ಪ್ರಾರಂಭವಾಗಿ 70 ವರ್ಷಗಳಾಗಿದ್ದು ಅಂದಿನಿಂದ ಸತತವಾಗಿ ಧಾರ್ಮಿಕ, ಸಾಮಾಜಿಕ ಸೇವಾಗಳನ್ನ ಸಂಸ್ಥೆ ನಿಸ್ವಾರ್ಥವಾಗಿ ನಡೆಸುತ್ತ ಬಂದಿದೆ. ಈ ನಿಟ್ಟಿನಲ್ಲಿ ಒಂದು ವರ್ಷದಿಂದ ವಿಶೇಷ ಕಾರ್ಯಕ್ರಮ ನಡೆಸುತ್ತಿದ್ದು ಇಂದಿನಿಂದ 70ರ ಸಂಭ್ರಮದ ಕಾರ್ಯಕ್ರಮ ನಡೆಯುತ್ತಿದೆ. ಎಂದು ಶಿರಡಿ ಸಂಸ್ಥಾನದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರ ಗೊರಕ್ಷ ಗಡಿಲ್ಕರ್ ತಿಳಿಸಿದರು.
ಇವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಸಾಯಿ ಆಧ್ಯಾತ್ಮಿಕ ಕೇಂದ್ರದ ಎಲ್ಲಾ ರೀತಿಯ ಸೇವೆಗಳು ಇತರ ಕೇಂದ್ರಗಳಿಗೆ ಮಾದರಿಯಾಗಿದೆ. ಅನ್ನದಾನ ಅರೋಗ್ಯ ಸೇವೆ ಹಾಗೂ ಶಿಕ್ಷಣ ಸೇವೆಯತಹ ಸೇವೆಗಳು ಇಂದು ಸಮಾಜಕ್ಕೆ ಅವಶ್ಯಕತೆ ಇದೆ. ಇಂತಹ ಸೇವೆಗಳ ಮುಖಾಂತರ ಸರ್ಕಾರದ ಜೊತೆ ಸಂಸ್ಥೆಗಳು ಕೈಜೋಡಿಸಿ ಮಾದರಿಯಾಗಬೇಕು ಎಂದು ತಿಳಿಸಿ ಸಂಸ್ಥೆಯ ಸೇವೆಯನ್ನ ಅವರು ಕೊಂಡಾಡಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾತನಾಡಿ ಸದಾ ನೊಂದವರಿಗೆ ಮಿಡಿಯುವ ಶ್ರೀ ಸಾಯಿಬಾಬಾರಿಗೆ ಸರ್ವ ಧರ್ಮಗಳ ಭಕ್ತರಿದ್ದಾರೆ. ಪ್ರತಿಯೊಬ್ಬರಿಗೂ ಬಾಬಾರು ಮಾರ್ಗದರ್ಶಕರು ಎಂದ ಅವರು ಸಾಯಿ ಅಧ್ಯಾತೀಕ ಕೇಂದ್ರದ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯನ್ನ ಮೆಚ್ಚಿ ತಾವು ಬಾಲ್ಯದಲ್ಲಿ ಕಷ್ಟ ಬಂದಾಗ ಇದೆ ಸಾಯಿ ಮಂದಿರದಲ್ಲಿ ಸಮಯ ಕಳೆಯುತ್ತಿದೆ ಎಂದು ಸಂಸದರು ಸ್ಮರಿಸಿದರು.
ವೇದಿಕೆಯಲ್ಲಿ ಟ್ರಸ್ಟ್ ಅಧ್ಯಕ್ಷ ಜ್ಯೋತಿ ರಾಘವನ್, ಸಂಸ್ಥೆಯ ಅಧ್ಯಕ್ಷ ಚಂದ್ ರಾಜಪಾಲ್ ಉಪಸ್ಥಿತರಿದ್ದರು. ಈ ಸುದರ್ಭದಲ್ಲಿ ನೂತನ ದಂಪತಿಗಳಾದ ಸಂಸದ ತೇಜಸ್ವಿ ಸೂರ್ಯ, ಶಿವಶ್ರೀ ಸ್ಕಂದ ಪ್ರಸಾದ್ ಇವರನ್ನ ಸತ್ಕರಿಸಲಾಯಿತು.