ಕೈಗೆಟುಕುವ ದರದಲ್ಲಿ ಸೀರೆಗಳ ಮಾರಾಟ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹೆಣ್ಣು ಮಕ್ಕಳಿಗೆ ಸುಲಭವಾಗಿ ಕೈಗೆಟುಕುವ ದರದಲ್ಲಿ ಸೀರೆಗಳ ಸೇಲ್ ಈ ಬಾರಿಯ ದೀಪಾವಳಿ ವರ್ಣರಂಜಿತವಾಗಿರುತ್ತದೆ ಎಂದು ನಗರಸಭೆ ಅಧ್ಯಕ್ಷೆ ಎಂ.ಪಿ.ಅನಿತಾ ಮೆಚ್ಚುಗೆ ವ್ಯಕ್ತಪಡಿಸಿದರು.

ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸಂಪ್ರದಾಯ ದಸರಾ ಮತ್ತು ದೀಪಾವಳಿ ಫೆಸ್ಟಿವಲ್ ಒಂದು ದಿನದ ಸೇಲ್ ಈವ್ವೆಂಟ್ ಉದ್ಘಾಟಿಸಿ ಮಾತನಾಡಿದರು.

- Advertisement - 

ಮಧುಬನಿ, ಕೋಚಂಪಲ್ಲಿ, ಬನಾರಸ್, ಬಾಗಲ್‌ಪುರಿ, ಇಳಕಲ್ ಸೀರೆಗಳು ವರ್ಣರಂಜಿತ ಹಾಗೂ ಅತ್ಯಾಕರ್ಷಣೀಯವಾಗಿದ್ದು, ಐದು ನೂರರಿಂದ ಇಪ್ಪತ್ತು ಸಾವಿರ ರೂ.ಗಳಲ್ಲಿ ಮಾರಾಟವಾಗುತ್ತಿದೆ. ಬ್ಯಾಗ್, ಡ್ರೆಸಸ್ಸ್, ಜ್ಯೂಯಲರಿ ಸೇಲ್ ಕೂಡ ದೀಪಾವಳಿ ಹಬ್ಬದ ಸಡಗರದಲ್ಲಿರುವ ಮಹಿಳೆಯರನ್ನು ಕೈಬೀಸಿ ಕರೆಯುವಂತಿದೆ ಎಂದು ಆಯೋಜಕರ ಪರಿಶ್ರಮವನ್ನು ಶ್ಲಾಘಿಸಿದರು.

ಹೇಮಲತಾ, ಸುಮಂಗಲ, ಸೌಪರ್ಣಿಕ, ನಗರಸಭೆ ಮಾಜಿ ಸದಸ್ಯೆ ಶ್ಯಾಮಲಾ ಶಿವಪ್ರಕಾಶ್ ಇವರುಗಳು ವೇದಿಕೆಯಲ್ಲಿದ್ದರು.

- Advertisement - 

 

 

Share This Article
error: Content is protected !!
";