ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಭಾರತದ ಶ್ರೀಮಂತ ಸಂಸ್ಕೃತಿಗೆ ಸಂದ ಶ್ರೇಷ್ಠ ಗೌರವ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಹಿಂದೂ ಧಾರ್ಮಿಕ ಪವಿತ್ರ ಗ್ರಂಥ ಭಗವದ್ಗೀತೆ ಹಾಗೂ ಭರತಮುನಿ ರಚಿಸಿರುವ ನಾಟ್ಯಶಾಸ್ತ್ರಕ್ಕೆ UNESCO ಮನ್ನಣೆ ದೊರೆತಿರುವುದು ಭಾರತೀಯತೆಗೆ ದೊರಕಿದ ಜಾಗತಿಕ ಗೌರವವಾಗಿದೆ.
ಯುನೆಸ್ಕೋದ ವಿಶ್ವ ಸ್ಮರಣೆ ನೊಂದಣಿಯಲ್ಲಿ ಸೇರಿರುವುದು ನಮ್ಮ ದೇಶದ ಜ್ಞಾನ ಸಂಸ್ಕೃತಿ, ಇತಿಹಾಸ ಹಾಗೂ ಸಮೃದ್ಧತೆಯ ಹಿರಿಮೆಯನ್ನು ಸಾಕ್ಷೀಕರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ಪರಂಪರೆಯ ರಕ್ಷಣೆ, ಐತಿಹಾಸಿಕ ಸ್ಮಾರಕಗಳ ಅಭಿವೃದ್ಧಿ, ನಮ್ಮ ಸಂಸ್ಕೃತಿಯ ಪೋಷಣೆಯ ಕಾರ್ಯ ಸಮರೋಪಾದಿಯಲ್ಲಿ ಸಾಗಿರುವುದು ವಿಶ್ವವೇ ಭಾರತವನ್ನು ಗೌರವದಿಂದ ನೋಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ವಿಜಯೇಂದ್ರ ತಿಳಿಸಿದ್ದಾರೆ.