ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಖಾಜಿ ಪಾಳ್ಯದ ಪ್ರಗತಿಪರ ರೈತ ಮಹಿಳೆ ಕೆ.ಎಂ. ಸುಶೀಲ ಭೈರಪ್ಪ ಅವರು ಶ್ರೀಗಂಧ ಬೆಳೆಗಾರರ ಸಂಘದ ರಾಜ್ಯ ಗೌರವಾಧ್ಯಕ್ಷರಾದ ವಿಶ್ರಾಂತ ಐಎಎಸ್ ಅಧಿಕಾರಿ ಕೆ.ಅಮರ ನಾರಾಯಣ ಇವರ ನೇತೃತ್ವದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಶ್ರೀಗಂಧ ಬೆಳೆಗೆ ಪರಿಹಾರ ಒದಗಿಸುವಂತೆ ಮನವಿ ಮಾಡಿದರು.
ತಮ್ಮ ಶ್ರೀಗಂಧ ಬೆಳೆದಿರುವ ಜಮೀನಿನಲ್ಲಿ ವಿದ್ಯುತ್ ಲೈನ್ ಹಾದು ಹೋಗಿದ್ದು ಇದಕ್ಕಾಗಿ ಭೂಸ್ವಾಧೀನಕ್ಕೆ ಪರಿಹಾರ ಧನ ಪಾವತಿಯಾಗದೇ ವಿಳಂಬವಾಗುತ್ತಿದ್ದು ತಾವುಗಳು ಸಂಬಂಧಿಸಿದ ಇಲಾಖೆಗೆ ಭೂ ಪರಿಹಾರ ನೀಡಲು ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಲಾಯಿತು.
ರೈತ ಮಹಿಳೆಯೊಬ್ಬರನ್ನು ಮುಖ್ಯ ಕಾರ್ಯದರ್ಶಿಯವರು ಭೇಟಿ ಮಾಡಿ ಪರಿಹಾರ ಸೂಚಿಸಿದ ಸರಳ ನಿಸ್ಪೃಹತೆಯ ಅಧಿಕಾರಿ ಶಾಲಿನಿ ರಜನೀಶ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಗಂಧ ಬೆಳೆಗಾರರು ಮತ್ತು ಶ್ರೀಗಂಧ ಸಂಘಟನೆಯ ಪದಾಧಿಕಾರಿಗಳಾದ ಪಿ. ಭೈರಪ್ಪ, ಉಪಾಧ್ಯಕ್ಷರಾದ ಶರಣಪ್ಪ, ಜಯರಾಮೇಗೌಡ, ಗೌರವಾಧ್ಯಕ್ಷ ಕೆ. ಅಮರನಾರಾಯಣ, ರೈತ ಮಹಿಳೆ ಸುಶೀಲ ಮತ್ತಿತರರು ಇದ್ದರು.