ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕರ್ನಾಟಕ, ಗೋವಾ, ಮಹಾರಾಷ್ಟ್ರದಲ್ಲಿ ನಡೆದಿದ್ದ 400 ಕೋಟಿ ದರೋಡೆ ಪ್ರಕರಣದಲ್ಲಿ ಮಹತ್ವದ ಅಂಶ ಬೆಳಕಿಗೆ ಬಂದಿದೆ.
ದೇಶವನ್ನೇ ದಂಗಾಗಿಸಿದ ಈ ದರೋಡೆ ನಡೆದು ದಿನಗಳು ಉರುಳಿದರು ಈವರೆಗೆ ಕಂಟೇನರ್ಗಳು ಹೋಗಿದ್ದೆಲ್ಲಿಗೆ? ಕಂಟೇನರ್ನಲ್ಲಿದ್ದ ಹಣ ಎಲ್ಲಿದೆ ಅನ್ನೋದು ರಿವೀಲ್ ಆಗಿಲ್ಲ. ಹೀಗಿರುವಾಗ ದೂರುದಾರ ಸಂದೀಪ್ ಪಾಟೀಲ್ ಬೆಳಗಾವಿ ಎಸ್ಪಿ ಕೆ.ರಾಮರಾಜನ್ಗೆ ಪತ್ರ ಬರೆಯುವ ಮೂಲಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಬೆಳಗಾವಿ ಎಸ್ಪಿ ಕೆ.ರಾಮರಾಜನ್ಗೆ ಪತ್ರ ಬರೆದಿರುವ 400 ಕೋಟಿ ದರೋಡೆ ಪ್ರಕರಣದ ದೂರುದಾರ ಸಂದೀಪ್ ಪಾಟೀಲ್, ಮಹಾರಾಷ್ಟ್ರ ಎಸ್ಐಟಿ ಪೊಲೀಸರಿಂದ ಪಾರದರ್ಶಕ ತನಿಖೆ ಆಗುತ್ತಿಲ್ಲ. ಘಟನೆ ಸಂಬಂಧ ಆಡಿಯೋ ದಾಖಲೆಗಳು ನನ್ನ ಬಳಿ ಇವೆ. ಅವುಗಳ ಆಧಾರದ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಎಸ್ಐಟಿ ವಿರುದ್ಧವೇ ದೂರು:
ಮಹಾರಾಷ್ಟ್ರ ಎಸ್ಐಟಿ ಪ್ರಕರಣ ಸಂಬಂಧ 8 ಆರೋಪಿಗಳನ್ನು ಬಂಧಿಸಿದೆ. ಆದರೆ ಮಹಾರಾಷ್ಟ್ರ ಪೊಲೀಸರ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಂದೀಪ್, ಈಗಾಗಲೇ ಎಸ್ಐಟಿ ಮತ್ತು ಪೊಲೀಸ್ ಮಹಾನಿರ್ದೇಶಕರ ವಿರುದ್ಧ ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರ ವಿರುದ್ಧ ಹೈಕೋರ್ಟ್ಗೆ ದೂರು ನೀಡಿದ್ದಾರೆ.
ಆ ಮೂಲಕ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿರುವ ಬಗ್ಗೆ ಸಂದೀಪ್ ಶಂಕೆ ವ್ಯಕ್ತಪಡಿಸಿದ್ದಾರೆ. ಮೂರು ರಾಜ್ಯಗಳ ಗಡಿಯಿರುವ ಚೋರ್ಲಾ ಘಾಟ್ನಲ್ಲಿ 400 ಕೋಟಿ ರೂ ದರೋಡೆ ಇತ್ತೀಚೆಗೆ ನಡೆದಿತ್ತು. 2 ಸಾವಿರ ಮುಖಬೆಲೆಯ ನೋಟುಗಳು ರದ್ದಾದ ಹಿನ್ನೆಲೆಯಲ್ಲಿ ಎಕ್ಸ್ಚೇಂಜ್ ಮಾಡಲು ತೆಗೆದುಕೊಂಡು ಹೋಗಲಾಗ್ತಿತ್ತು ಎನ್ನಲಾಗಿತ್ತು.
ದೂರುದಾರ ಸಂದೀಪ್ ಪಾಟೀಲ್ನಿಂದ ಈ ರಾಬರಿ ಕೇಸ್ನ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಅನ್ನೋದು ಗೊತ್ತಾಗಿತ್ತು.ಈ ಸಂದೀಪ್ ಪಾಟೀಲ್, ಇದೇ ಕಿಶೋರ್ನ ಆಪ್ತ. 400 ಕೋಟಿ ದರೋಡೆಯಾಗಿದ್ದು ತಿಳಿಯುತಿದ್ದಂತೆಯೇ ಸಂದೀಪ್ನನ್ನು ಅಪಹರಿಸಿ, 400 ಕೋಟಿ ಹಣ ಎಲ್ಲಿಟ್ಟಿದ್ದೀಯಾ? ಕಂಟೇನರ್ಗಳು ಎಲ್ಲಿವೆ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿ ಸಂದೀಪ್ಗೆ ಕಿಶೋರ್ ಗ್ಯಾಂಗ್ ಚಿತ್ರಹಿಂಸೆ ನೀಡಿತ್ತು. ಹೀಗೆ ಹಿಂಸೆಗೊಳಗಾಗಿದ್ದ ಸಂದೀಪ್, ಕಿಡ್ನ್ಯಾಪರ್ಸ್ನಿಂದ ತಪ್ಪಿಸಿಕೊಂಡು ಬಂದು ನಾಸೀಕ್ ಠಾಣೆಗೆ ದೂರು ನೀಡಿದ್ದ.

