ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಕ್ಫ್‌ಪೆಡಂಭೂತ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಹುಟ್ಟೂರಿಗೂ ವಕ್ಕರಿಸಿಕೊಂಡಿದೆ ಎಂದು ಬಿಜೆಪಿ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ.
ಭ್ರಷ್ಟ ಸಿದ್ದರಾಮಯ್ಯ ಅವರ ತುಘಲಕ್‌ದರ್ಬಾರ್‌ನಂತೆ ಮೆರೆಯುತ್ತಿರುವ ಸಚಿವ ಜಮೀರ್ ಅಹಮದ್ ಖಾನ್ ಅವರು ವಕ್ಫ್‌ಮೂಲಕ ನಮ್ಮ ಮೂಲ ಸಂಸ್ಕೃತಿ, ಆಸ್ತಿ ಪಾಸ್ತಿ, ಐತಿಹಾಸಿಕ ಹಿನ್ನಲೆ ಹಿಂದೂಗಳ ಅಸ್ತಿತ್ವವನ್ನೇ ನಾಶ ಮಾಡಲು ಹೊರಟಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆಲ್ಲಾ ಪರಿಹಾರ ಎಂದರೆ, ವಕ್ಫ್‌ಸರ್ವನಾಶವಾಗಬೇಕು ಹಾಗೂ ಕಾಂಗ್ರೆಸ್‌ಮೂಲೆಗುಂಪಾಗಬೇಕು. ಅದಕ್ಕೂ ಮೊದಲು ನಾಡಿನ ಜನತೆ ಜಾಗೃತರಾಗಬೇಕು ಎಂದು ಅವರು ಕರೆ ನೀಡಿದ್ದಾರೆ.
ನಾಡಪ್ರಭು ಕೆಂಪೇಗೌಡರು ಕಟ್ಟಿದ ಚಿಕ್ಕಪೇಟೆ, ಬಳೇ ಪೇಟೆ, ಕಾಟನ್ ಪೇಟೆ ಅವರದ್ದು ಅಂದಿದ್ದಾಯ್ತು, ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್ ಅವರದ್ದು ಅಂದಿದ್ದಾಯ್ತು, ಈಗ ಲಾಲ್ ಬಾಗ್ ಉದ್ಯಾನವನವೂ ಅವರದ್ದೇ ಅಂತೆ ಎಂದು ಅಶೋಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ ವಕ್ಫ್ ಮಂಡಳಿ ಹೆಸರಿನಲ್ಲಿ ನಡೆಯುತ್ತಿರುವ ಈ ದಬ್ಬಾಳಿಕೆಗೆ ಶೀಘ್ರವೇ ಅಂತ್ಯ ಹಾಡದಿದ್ದರೆ, ಜನ ನಿಮ್ಮ ಸರ್ಕಾರದ ವಿರುದ್ಧ ದಂಗೆ ಏಳುವ ದಿನ ದೂರವಿಲ್ಲ.
ಇನ್ನಾದರೂ ಈ ಓಲೈಕೆ ರಾಜಕಾರಣ ಬಿಡಿ. ನಿಮ್ಮನ್ನ ನಂಬಿ ಮತ ನೀಡಿರುವ ನಾಡಿನ ಜನಸಾಮಾನ್ಯರ ಆಸ್ತಿ-ಪಾಸ್ತಿ ಉಳಿಸುವ ಮೂಲಕ ಅವರ ಋಣ ತೀರಿಸಿ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.