ಸಂಗೊಳ್ಳಿ ರಾಯಣ್ಣನವರ ಬದುಕು ಸ್ಫೂರ್ತಿದಾಯಕ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಬದುಕು ಸಮರ್ಪಿಸಿ, ತನ್ನ 32ನೇ ವಯಸ್ಸಿಗೆ ಬ್ರಿಟಿಷ್ ಸರ್ವಾಧಿಕಾರಿ ಸಾಮ್ರಾಜ್ಯದ ನೇಣುಕುಣಿಕೆಗೆ ಕೊರಳೊಡ್ಡಿದ ಮಹಾನ್ ದೇಶಭಕ್ತ ಸಂಗೊಳ್ಳಿ ರಾಯಣ್ಣ ಈ ನೆಲದ ತ್ಯಾಗ ಮತ್ತು ಬಲಿದಾನದ ಸಂಕೇತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರು ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 194ನೇ ಪುಣ್ಯಸ್ಮರಣೆ ಅಂಗವಾಗಿ ರಾಯಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಮಾತನಾಡಿದರು.

- Advertisement - 

ಗುಲಾಮಗಿರಿಯ ಕಗ್ಗತ್ತಲಲ್ಲಿ ನರುಳುತ್ತಿದ್ದ ಭಾರತೀಯರನ್ನು ಸ್ವಾತಂತ್ರ್ಯವೆಂಬ ಬೆಳಕಿನೆಡೆಗೆ ಮುನ್ನಡೆಸಿದ ಸಂಗೊಳ್ಳಿ ರಾಯಣ್ಣನ ಸ್ವಾಮಿ ನಿಷ್ಠೆ, ಸಮರ್ಪಣಾಭಾವವನ್ನು ಅವರ ಪುಣ್ಯಸ್ಮರಣೆಯ ದಿನ ಗೌರವದಿಂದ ನೆನೆದು, ನಮಿಸುತ್ತೇನೆ ಎಂದು ಸಿಎಂ ತಿಳಿಸಿದರು.

- Advertisement - 

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬದುಕು ಸ್ಫೂರ್ತಿದಾಯಕವಾಗಿದ್ದು, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಕಿತ್ತೂರು ರಾಣಿ ಚೆನ್ನಮ್ಮನವರ ಬಲಗೈ ಬಂಟನಾಗಿ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರು ಅಪ್ರತಿಮ ದೇಶಭಕ್ತರಾಗಿದ್ದರು. ಬ್ರಿಟಿಷರ ವಿರುದ್ಧ ಸೆಣೆಸಲು ಗೆರಿಲ್ಲಾ ಯುದ್ಧತಂತ್ರಗಾರಿಕೆಯನ್ನು ಬಳಸಿದ್ದರು. ಭಾರತದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸಂಗೊಳ್ಳಿ ರಾಯಣ್ಣನವರು ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಅತೀವ ಗೌರವ ನೀಡುವ ಅವರ ಬದುಕು ನಮಗೆಲ್ಲ ಸ್ಫೂರ್ತಿ ಎಂದು ಅವರು ತಿಳಿಸಿದರು.

- Advertisement - 

 

Share This Article
error: Content is protected !!
";