ವಿಕಲಚೇತನ ಉದ್ಯೋಗಿಗಳು ಕುಮಾರಸ್ವಾಮಿ ಕುಟುಂಬದೊಟ್ಟಿಗೆ ಸಂಕ್ರಾಂತಿ ಆಚರಣೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಸ್ಕಾಂ ಸೇರಿ ಕೆಪಿಟಿಸಿಎಲ್ ನ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ವಿಕಲಚೇತನ ಉದ್ಯೋಗಿಗಳು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ತಮ್ಮ ಕುಟುಂಬಗಳ ಸಮೇತ ಬೆಂಗಳೂರಿನ ಬಿಡದಿ ತೋಟದ ಮನೆಗೆ ಬಂದು ಸಂಕ್ರಾಂತಿ ಹಬ್ಬ ಆಚರಿಸಿದ ವಿಶೇಷ ಸಂದರ್ಭವಿದು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ನನ್ನದು ಧನ್ಯತೆಯ ಭಾವ. ಭಗವಂತ ಕೊಟ್ಟ ಸಣ್ಣ ಅವಕಾಶದಲ್ಲಿ ಇಷ್ಟು ಜನ ವಿಕಲಚೇತನ ಕುಟುಂಬಗಳಿಗೆ ನೆರವಾಗುವ ಅವಕಾಶ ನನಗೆ ಸಿಕ್ಕಿತ್ತು. ಇವರ ಸೇವೆಯನ್ನು ಈಶ ಸೇವೆ ಎಂದೇ ನಂಬಿದ್ದೇನೆ.

- Advertisement - 

ಸತತ 7ನೇ ವರ್ಷವೂ ಇವರೆಲ್ಲರೂ ನನ್ನ ಜತೆಯಲ್ಲಿ ಸುಗ್ಗಿ ಹಬ್ಬ ಆಚರಿಸಿದರು ಎಂದು ಕುಮಾರಸ್ವಾಮಿ ಭಾವುಕರಾದರು.

- Advertisement - 

ಸುಖ ಸಂತೋಷ, ನೆಮ್ಮದಿ ಸಮೃದ್ಧಿಯ ಪ್ರತೀಕವಾದ ಸಂಕ್ರಾಂತಿಯ ಎಳ್ಳುಬೆಲ್ಲದಂತೆ, ಈ ಪುಣ್ಯದಿನ ಪಥ ಬದಲಿಸುತ್ತಿರುವ ಆ ಸೂರ್ಯದೇವನ ಕೃಪೆಯಿಂದ ಇವರೆಲ್ಲರೂ ಸಮಾಜದಲ್ಲಿ ಇನ್ನೂ ಉತ್ತರೋತ್ತರವಾಗಿ ಉನ್ನತ ಸಾಧನೆಗಳನ್ನು ಮಾಡಲಿ ಎಂದು ಕುಮಾರಸ್ವಾಮಿ ಅವರು ಹಾರೈಸಿ ಈ ಕುಟುಂಬಗಳ ಪ್ರೀತಿ, ವಿಶ್ವಾಸ, ವಾತ್ಸಲ್ಯಕ್ಕೆ ಆಭಾರಿ ಆಗಿದ್ದೇನೆ ಎಂದು ತಿಳಿಸಿದರು.

 

Share This Article
error: Content is protected !!
";