ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ
ನಗರದ ರಾಜೀವ್ ಗಾಂಧಿ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಆಹಾರ ಹಾಗೂ ವಿವಿಧ ಬಗೆಯ ಆಹಾರ ಧಾನ್ಯ ನೀಡುವ ಮೂಲಕ ಸಂಕ್ರಾಂತಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳಿಗಾಗಿ ವಿವಿಧ ಆಟಗಳನ್ನು ಸಹ ಏರ್ಪಡಿಸಲಾಗಿತ್ತು.
ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಭಾಗ್ಯಮ್ಮ ಮಾತನಾಡಿ ಮಕ್ಕಳಿಗೆ ಸಂಕ್ರಾಂತಿ ಹಬ್ಬದ ಹಳ್ಳಿ ಸಂಸ್ಕೃತಿ, ಸಂಭ್ರಮಾಚರಣೆ, ವಿವಿಧ ಸಾಂಪ್ರದಾಯಿಕ ಸಾಂಸ್ಕೃತಿಕ ಆಚರಣೆಗಳನ್ನ ಮಕ್ಕಳಿಗೆ ತಿಳಿಸುವ ಸಲುವಾಗಿ ಸಂಕ್ರಾಂತಿ ಹಬ್ಬ ಆಚರಿಸಲಾಯಿತು.
ಸಂಕ್ರಾಂತಿಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ ಎಂದು ತಿಳಿಸಲು ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು. ಮಕ್ಕಳು ಪರಸ್ಪರ ಎಳ್ಳು–ಬೆಲ್ಲ ವಿನಿಮಯ ಮಾಡಿಕೊಂಡರು. ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಿದರು. ಈ ಸಂದರ್ಭದಲ್ಲಿ
ನಗರಸಭಾ ಸದಸ್ಯೆ ಹಂಸಪ್ರಿಯ, ಅಂಗನವಾಡಿ ಮೇಲ್ವಿಚಾರಕಿ ಚೈತನ್ಯ, ಕಾರ್ಯಕರ್ತರಾದ ಭಾಗ್ಯಮ್ಮ, ಚಂದ್ರಮ್ಮ,ನಂದಿನಿ, ಸಹಾಯಕಿ ಸರಸ್ವತಮ್ಮ, ಆಶಾ, ಶಿಕ್ಷಕ ಚಿಕ್ಕಗಂಗಯ್ಯ, ಪೋಷಕರಾದ ಅನುಸೂಯಮ್ಮ, ಶೋಭಮ್ಮ, ಸುಮಾ, ಲಕ್ಷ್ಮಿ, ಧೀಶ, ಭಾವನ ಇದ್ದರು.

