ಲಾವಣ್ಯ ವಿದ್ಯಾ ಸಂಸ್ಥೆಯಲ್ಲಿ ಸಂಕ್ರಾಂತಿಯ ಸಂಭ್ರಮ ಸಡಗರ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲಾವಣ್ಯ ವಿದ್ಯಾಸಂಸ್ಥೆಯಲ್ಲಿ ಸಡಗರ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಅದರಲ್ಲೂ  ಪುಟಾಣಿ ಮಕ್ಕಳು ವಿವಿಧ ವೇಷಭೂಷಣ ತೊಟ್ಟು ನೃತ್ಯ ಪ್ರದರ್ಶನ ಮಾಡಿದರು. ಸಂಸ್ಥೆಯ ಗೌರವ ಕಾರ್ಯದರ್ಶಿಗಳು ಹಾಗೂ ಟಿಎಪಿಸಿಎಂಎಸ್ ನಿರ್ದೇಶಕರಾದ ವಿಶ್ವಾಸ್ ಹನುಮಂತೇಗೌಡ ರವರು ಮಾತನಾಡಿ  ಸಂಕ್ರಾಂತಿ ಎಂದರೆ ರೈತರ ಹಬ್ಬ. ಸಂಕ್ರಾಂತಿ ಎಂದರೆ ಜಾನುವಾರುಗಳ ಹಬ್ಬ.ದೇಶದ ಮೂಲೆ ಮೂಲೆಯಲ್ಲೂ ಸಂಕ್ರಾಂತಿ ಹಬ್ಬವನ್ನು ವಿವಿಧ ಹೆಸರುಗಳಿಂದ  ಹಬ್ಬವನ್ನು ಆಚರಣೆ ಮಾಡುತ್ತಾರೆ. ನಮ್ಮ ರಾಜ್ಯದ ರೈತರು ಸುಗ್ಗಿ ಹಬ್ಬವನ್ನು ಸಂತೋಷ ಸಡಗರದಿಂದ ಆಚರಣೆ ಮಾಡುತ್ತಾರೆ.

ಈ ವರ್ಷದ ಮೊದಲನೆ ಹಬ್ಬ ಸಂಕ್ರಾಂತಿ ಹಬ್ಬವಾಗಿದೆ. ಈ ಹಬ್ಬದ ವಿಶೇಷ ಎಂದರೆ ಕಬ್ಬು ಅವರೆ ಕಾಯಿ ಗೆಣಸು ಮೊದಲಾದ ವಸ್ತುಗಳನ್ನು ರಾಗಿರಾಶಿಯ ಮುಂದೆ ಇಟ್ಟು ಪೂಜೆ ಮಾಡುತ್ತಾರೆ.ಜೊತೆಗೆ “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡು”ಎಂಬ ನಾಣ್ಣುಡಿ ಯಂತೆ ಎಲ್ಲರೂ ಒಳ್ಳೆಯ ಅಭ್ಯಾಸವನ್ನು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ನಡೆಯಬೇಕು ಎಂದು ಹೇಳಿದರು.  ಸಂಕ್ರಾಂತಿ ಹಬ್ಬಆಚರಣಾ ಕಾರ್ಯಕ್ರಮ ದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಯಶೋಧ ಮೇಡಮ್ ರವರು ಅಧ್ಯಕ್ಷತೆ ವಹಿಸಿದ್ದರು.

- Advertisement - 

 ಕಾರ್ಯಕ್ರಮದಲ್ಲಿ ಲಾವಣ್ಯ ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ಪ್ರಾಂಶುಪಾಲ ಎಂ. ಸಿ.ಮಂಜುನಾಥ್,ಬಿಎಡ್ ಕಾಲೇಜು ಪ್ರಾಂಶುಪಾಲ ಪ್ರೊ ಜಿ ಕೃಷ್ಣಮೂರ್ತಿ, ಉಪನ್ಯಾಸಕರಾದ ಮಹಾದೇವ, ಎನ್ ರಶ್ಮಿ, ಅನುಷಾ,ಹರ್ಷಿತಾ, ಗಂಗಮೂರ್ತಿ, ರಾಕೇಶ್, ಅನು, ಮೀನಾ, ಮುಖ್ಯ ಶಿಕ್ಷಕ ಅರುಣ್ ಕುಮಾರ್, ದೈಹಿಕ ಶಿಕ್ಷಕ ಅರುಣ್ ಸೇರಿದಂತೆ ಲಾವಣ್ಯ ವಿದ್ಯಾ ಸಂಸ್ಥೆಯ ಎಲ್ಲಾ ವಿಭಾಗಗಳ ಶಿಕ್ಷಕರು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

- Advertisement - 

Share This Article
error: Content is protected !!
";