ಪ್ರೆಸಿಡೆನ್ಸಿ ಶಾಲೆಯಲ್ಲಿ ಮನರಂಜನೆಗೆ ಮುನ್ನುಡಿ ಬರೆದ ಸಂಕ್ರಾಂತಿ ಹಬ್ಬ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ ಮನರಂಜನೆಗೆ ಮುನ್ನುಡಿ ಬರೆದ ಸಂಕ್ರಾಂತಿ ಹಬ್ಬವನ್ನು ಶಾಲಾ ಮಕ್ಕಳು ಸಾಂಪ್ರದಾಯಿಕವಾಗಿ ಅದ್ದೂರಿಯಿಂದ ಆಚರಿಸಿದರು.

ಸಂಕ್ರಾಂತಿ ಹಬ್ಬದ ಅಂಗವಾಗಿ ಶಾಲೆಯಲ್ಲಿ ರೈತರ ಕಾಳುಗಳನ್ನ ರಾಶಿ ಮಾಡಿ ಪೂಜೆಸಿದಲ್ಲದೆ ಎಳ್ಳು ಬೆಲ್ಲ, ನೆಲಗಡಲೆ, ಹುರಿಗಡಲೆ, ಸಕ್ಕರೆ ಅಚ್ಚು, ಕೊಬ್ಬರಿ, ಬೆರೆಸಿದ ವಿಶೇಷ ಸಿಹಿಯನ್ನು ನೈವೇದ್ಯ ಮಾಡಿ ನಂತರ ತಮ್ಮ ಆತ್ಮೀಯರೊಂದಿಗೆ ಹಂಚಿ ಸಂತೋಷ ವ್ಯಕ್ತಪಡಿಸಿದರು.

- Advertisement - 

ಪ್ರೆಸಿಡೆನ್ಸಿ ಶಾಲೆಯ ಕಾರ್ಯದರ್ಶಿ ತಿಮ್ಮಾರೆಡ್ಡಿ ಅಲಿಯಾಸ್ ಗಿರೀಶ್ ಅವರು ಯಾವುದೇ ಕಾರ್ಯಕ್ರಮ ಮಾಡಿದರೂ ವಿಭಿನ್ನವಾಗಿ ಆಯೋಜನೆ ಮಾಡಲಿದ್ದು ಇದರ ಅಂಗವಾಗಿ ಸಮಾಜ ಸೇವಕಿ ಮಾನಸ ಮಂಜುನಾಥ್ ಅವರೊಟ್ಟಿಗೆ ಮಕ್ಕಳೊಂದಿಗೆ ಸಂವಾದ ಏರ್ಪಡಿಸಿ ಗಮನ ಸೆಳೆದರು.
ಮಕ್ಕಳು ನಾನಾ ರೀತಿಯ ಪ್ರಶ್ನೆಗಳನ್ನ ಮಾನಸ ಅವರಿಗೆ ಕೇಳುವ ಮೂಲಕ ಪ್ರೌಢಿಮೆ ಮೆರೆದರು.

ಮಹಿಳಾ ಸಬಲೀಕರಣ ಎಂದರೆ ಏನು, ಸಾರ್ವಜನಿಕವಾಗಿ ಸೇವೆ ಮಾಡುವ ಉದ್ದೇಶ ಏನು, ರಾಜಕಾರಣಕ್ಕೆ ಆಗಮಿಸುವಿರಾ, ಸೇವೆಯಲ್ಲಿ ಪರಮಾತ್ಮನನ್ನು ಕಾಣುವಿರಾ, ಸಂಸ್ಕಾರ, ಸಂಸ್ಕೃತಿ ಕುರಿತು ನಿಮ್ಮ ಅಭಿಪ್ರಾಯ ಏನು ಎಂಬಿತ್ಯಾದಿ ಪ್ರಶ್ನೆಗಳನ್ನ ಮಕ್ಕಳು ಮಹಿಳಾ ಅತಿಥಿ ಮಾನಸ ಅವರಿಗೆ ಕೇಳಿ ಗಮನ ಸೇಳೆದರು.

- Advertisement - 

ಮನವಿ ಸೇವಾ ಸಮಸ್ಥೆಯ ಮುಖ್ಯಸ್ಥೆ, ಸಮಾಜ ಸೇವಕಿ ಮಾನಸ ಮಂಜುನಾಥ್ ಮಕ್ಕಳ ಪ್ರಶ್ನೆಗಳಿಗೆ ಅಬಲರು, ಬಡವರ ಸೇವೆ ಮಾಡಲು ಆಸಕ್ತಿ ಇದ್ದು ಅದಕ್ಕಾಗಿ ಸಾರ್ವಜನಿಕ ಸೇವೆಗೆ ಆಗಮಿಸಿದ್ದೇನೆ ಎಂದು ತಿಳಿಸಿದರು.

ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕೆಲಸ ಮಾಡುವ ಉದ್ದೇಶ ಹೊಂದಿದ್ದು ಇನ್ನೂ ಪರಿಣಾಮಕಾರಿಯಾಗೆ ಕೆಲಸ ಮಾಡಬೇಕೆಂದರೆ ಅಧಿಕಾರ ಬೇಕಾಗುತ್ತದೆ. ಆ ಅಧಿಕಾರ ಸಿಗುವುದು ರಾಜಕೀಯ ಕ್ಷೇತ್ರದಲ್ಲಿ, ಹಾಗಾಗಿ ರಾಜಕೀಯ ಪ್ರವೇಶ ಮಾಡುವ ಉದ್ದೇಶ ಹೊಂದಿರುವುದಾಗಿ ಮಾನಸ ಮಂಜುನಾಥ್ ತಿಳಿಸಿದರು.

ಮಕರ ಸಂಕ್ರಾಂತಿ ಸಂಭ್ರಮದ ಅಂಗವಾಗಿ ಮಕ್ಕಳಲ್ಲಿ ಅರಿವು ಮೂಡಿಸಿದ ಮಾನಸ ಮಂಜುನಾಥ್ ಹಬ್ಬ ಆಚರಣೆಗಳು ನಮಗೆ ಬೇಕಿಗೆ. ಸಂಕ್ರಾಂತಿ ಹಬ್ಬ ಸುಗ್ಗಿಯನ್ನು ಸಂಭ್ರಮಿಸಲು ಆಚರಣೆ ಮಾಡಲಿದ್ದಾರೆ. ಹಳ್ಳಿಯ ಸೊಗಡಿನೊಂದಿಗೆ ಸಂಕ್ರಾಂತಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದಾರೆ ಎಂದು ಹೇಳಿದರು.  

ಇದೇ ಸಂದರ್ಭದಲ್ಲಿ ಮಕ್ಕಳು ವಿನೂತನ ಗೆಟಪ್ ನಿಂದ ವಿಭಿನ್ನವಾಗಿ ಹಾಸ್ಯಮಯವಾಗಿ ಸಂಕ್ರಾಂತಿ ಹಬ್ಬವನ್ನು ರಂಜಿಸಿದರು.

ಪ್ರೆಸಿಡೆನ್ಸಿ ಶಾಲೆಯ ಕಾರ್ಯದರ್ಶಿ ಬಿ.ಜಿ ತಿಮ್ಮಾರೆಡ್ಡಿ(ಗಿರೀಶ್), ಮುಖ್ಯಶಿಕ್ಷಕ ಕಲಾಂದರ್ ಬಾಷಾ, ಶಿಕ್ಷಕರಾದ ನಂದನ್, ಗೀತಾ, ಷಯಿನಾ, ಪೋಷಕರು ಮತ್ತಿತರರು ಇದ್ದರು.

 

Share This Article
error: Content is protected !!
";