ಕನ್ನಡ ಜಾಗೃತ ಪರಿಷತ್ ವತಿಯಿಂದ ಸಂಕ್ರಾಂತಿ ಸುಗ್ಗಿ ಸಂಭ್ರಮ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕನ್ನಡ ಜಾಗೃತ ಪರಿಷತ್ತು ವತಿಯಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಸುಗ್ಗಿ ಸಂಭ್ರಮ-2026 ಜಾನಪದ ನೃತ್ಯ ಗೀತೆಗಳ ಕಾರ್ಯಕ್ರಮ ಕನ್ನಡ ಜಾಗೃತ ಭವನದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಕಬ್ಬು, ಎಳ್ಳು, ಬೆಲ್ಲ ವಿತರಿಸಿ ಶುಭಾಶಯ ಕೋರಲಾಯಿತು.

- Advertisement - 

ಕಾರ್ಯಕ್ರಮದಲ್ಲಿ ಎ.ಜಯರಾಮ್ ಮತ್ತು ತಂಡದವರಿಂದ ಜಾನಪದ ಗೀತೆಗಳ ಗಾಯನ, , ನಾಟ್ಯ ಮಯೂರಿ ಕಲಾ ಕೇಂದ್ರ ಟ್ರಸ್ಟ್ ತಂಡದಿಂದ ಜಾನಪದ ನೃತ್ಯಗಳ ಪ್ರದರ್ಶನ ನಡೆಯಿತು. 

 ಕನ್ನಡ ಜಾಗೃತ ಪರಿಷತ್ತಿನ ಅಧ್ಯಕ್ಷ ಕೆ.ವೆಂಕಟೇಶ್, ಪ್ರಧಾನ ಕಾರ್ಯೆದರ್ಶಿ ಡಿ.ಪಿ.ಆಂಜನೇಯ, ಮಾಜಿ ಅಧ್ಯಕ್ಷರಾದ ಜಿ.ಸತ್ಯನಾರಾಯಣ, ಡಾ.ಎ.ಓ.ಆವಲಮೂರ್ತಿ, ಕನ್ನಡ ಪಕ್ಷದ ಮುಖಂಡರಾದ ಸಂಜೀವ್ ನಾಯಕ್, ಕಜಾಪ ಪದಾಧಿಕಾರಿಗಳಾದ ಸಿ.ವೆಂಕಟರಾಜು ಏಕಾಶಿಪುರ, ಸೂರ್ಯನಾರಾಯಣ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಪಿ.ಗೋವಿಂದರಾಜು, ಕಾರ್ಯದರ್ಶಿ ಜಯರಾಮ್, ಕಸಬಾ ಜಿ.ಕೋಶಾಧ್ಯಕ್ಷ ಸುರೇಶ್, ಕೋದಂಡರಾಮ್, ಅಣ್ಣಯ್ಯ ಮೊದಲಾದವರು ಭಾಗವಹಿಸಿದ್ದರು.

- Advertisement - 

 

Share This Article
error: Content is protected !!
";