ಸಂಕ್ರಾಂತಿ ನಾಡಿಗೆ ಸುಗ್ಗಿ ಸಂಭ್ರಮ ತರುವ ಹಬ್ಬ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಎಳ್ಳು ಬೆಲ್ಲ ಪರಸ್ಪರ ಹಂಚಿ ಸುಖ ಸುಮ್ಮಾನದಿಂದ ಬೀಗುವ ಕಾಲ. ಹೊಸ ಪೈರು ಹಾಕಿ ಫಸಲು ಕೊಯ್ಲು ಮಾಡಿ ರಾಶಿ ರಾಶಿ ಪೂಜಿಸಿ ಕೃಷಿಕನ ಭಾಗ್ಯದ ಬಾಗಿಲು ತೆರೆಯುವ ಕಾಲವೇ ಸಂಕ್ರಾಂತಿ.

ಹೆಣ್ಣು ಮಕ್ಕಳು ಸಂಭ್ರಮದಿಂದ ಮನೆ ಮನದುಂಬಿ ವರುಷದಿಂದ ಭೂತಾಯಿಗೆ ಪೊಡಮಟ್ಟು ಸೂರ್ಯನ ಉತ್ತರಾಯಣ ಪುಣ್ಯಕಾಲದ ಹೊಸ ಸಂಕ್ರಮಣಕ್ಕೆ ಚಾಲನೆ ಕೊಡುವ ಸಂದರ್ಭದಲ್ಲಿ ಈ ಸಂಕ್ರಾಂತಿ ಸಂಭ್ರಮಾಚರಣೆ ಶುಭ ತರಲಿ ಕಹಿ ಕಳೆದು ಸಿಹಿ ಸಂಭ್ರಮ ತರಲಿ ಎಲ್ಲರ ಬಾಳಿಗೆ ಎಂದು ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ರಾಜ್ಯ ನಿರ್ದೇಶಕರು ಹಾಗೂ ಸತ್ವ ಮಹಿಳಾ ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾ ರವಿಶಂಕರ್ ರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ನುಡಿದರು.

- Advertisement - 

ನಗರದ ಬಸವೇಶ್ವರ ಗುಡಿಯಲ್ಲಿ ಏರ್ಪಡಿಸಲಾಗಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಹಿರಿಯೂರು ತಾಲ್ಲೂಕು ಘಟಕದ ಅಧ್ಯಕ್ಷೆ ತ್ರಿವೇಣಿ ಸತೀಶ್ ಮಾತನಾಡಿ ಎಲ್ಲಾ ಹೆಣ್ಣುಮಕ್ಕಳೂ ಸಂಘಟಿತರಾಗಿ ಬರಬೇಕು ಭಾಗವಹಿಸುವಿಕೆ ಮುಖ್ಯ ಎಂದು ನುಡಿದರು. ಬಸವಶ್ರೀ ಭಜನಾ ಮಂಡಳಿಯ ಅಧ್ಯಕ್ಷೆ ವೀಣಾ ಉಮಾಶಂಕರ್ ರವರು ಆಶಯ ನುಡಿಗಳನ್ನಾಡಿದರು.

ಭಾವನಾ ನಿರೂಪಿಸಿದರು. ವಿಮಲಾ ಕಾಂತರಾಜ್ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಸರ್ವಮಂಗಳಾ ಹಾಗೂ ಲತಾ ಶಿವಪ್ರಸಾದ್ ಸದಸ್ಯರಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಿದರು.

- Advertisement - 

ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕಿ ಶ್ಯಾಮಲಾ ಸತೀಶ್, ಉಪಾಧ್ಯಕ್ಷೆ ಯಮುನಾ ಉಮಾಕಾಂತ್ ಹಾಗೂ ರತ್ನಮ್ಮ, ಜಂಟಿ ಕಾರ್ಯದರ್ಶಿ ಲಲಿತಮ್ಮ ಹಾಗೂ ನಿರ್ಮಲಾ ಮಹಂತೇಶ್ ಉಪಸ್ಥಿತರಿದ್ದರು.

 

 

Share This Article
error: Content is protected !!
";