ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಐತಿಹಾಸಿಕ ಚಿತ್ರದುರ್ಗದ ಮಧ್ಯ ಭಾಗದಲ್ಲಿರುವ ಭರಮಣ್ಣನಾಯಕನ ಕಾಲದ ಸಂತೆಹೊಂಡದ ತಡೆಗೋಡೆ ಎತ್ತರಿಸಿ ಮೆಟ್ಟಿಲುಗಳ ಕ್ಲೀನಿಂಗ್‌ಗೆ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಭಾನುವಾರ ಭೂಮಿ ಪೂಜೆ ಸಲ್ಲಿಸಿದರು.
ಪೂಜೆ ಸಲ್ಲಿಸಿ ನಂತರ ಮಾತನಾಡಿದ ಶಾಸಕರು ಸಂತೆಹೊಂಡಕ್ಕೆ ತನ್ನದೆ ಆದ ಇತಿಹಾಸವಿದೆ. ಇಲ್ಲಿ ಸ್ವಚ್ಚತೆಯನ್ನು ಕಾಪಾಡುವುದು ಮುಖ್ಯವಾಗಿರುವುದರಿಂದ ಮೆಟ್ಟಿಲುಗಳನ್ನು ಸ್ವಚ್ಚಗೊಳಿಸಿ ಮಿನಿ ಪಾರ್ಕ್ ನಿರ್ಮಿಸಿ ಅಂದ ಹೆಚ್ಚಿಸಲಾಗುವುದೆಂದರು.
ತಮ್ಮ ಹುಟ್ಟುಹಬ್ಬದ ನಿಮಿತ್ತ ಇದೆ ಸಂದರ್ಭದಲ್ಲಿ ಪೌರ ಕಾರ್ಮಿಕರೊಂದಿಗೆ ಕೇಕ್ ಕತ್ತರಿಸಿದರು. ನಗರಸಭೆ ಮಾಜಿ ಅಧ್ಯಕ್ಷರುಗಳಾದ ಹೆಚ್.ಮಂಜಪ್ಪ, ಮಹಮದ್ ಅಹಮದ್ ಪಾಷ, ಹೆಲ್ತ್ ಇನ್ಸ್‌ಪೆಕ್ಟರ್ ಭಾರತಿ, ದಫೆದಾರ್ ನಿಂಗರಾಜ್ ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.