ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೊಟ್ಟ ಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಹಿರಿಯರ ಮಾತು ಪುಂಗಿವೀರ ಸಚಿವ ಸಂತೋಷ್ ಲಾಡ್ ಅವರಿಗೆ ನೂರಕ್ಕೆ ನೂರರಷ್ಟು ಅನ್ವಯವಾಗುತ್ತದೆ.! ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಕಲಘಟಗಿ ತಾಲೂಕಿನ ಕೆ.ಹುಣಸಿಕಟ್ಟಿ ಗ್ರಾಮದ ಜನರು ದಶಕಗಳಿಂದ ನಿತ್ಯ ನಡಿಗೆ ನರಕ ಅನುಭವಿಸುತ್ತಿದ್ದರೂ ಅಂಗೈನಲ್ಲಿ ಆಕಾಶ ತೋರಿಸುವ ಸಂತೋಷ್ ಲಾಡ್ ಅವರು ಮಾತ್ರ ಸಮಸ್ಯೆ ಪರಿಹರಿಸಿಲ್ಲ.!
ಮುಕ್ಕಲ್ಲ ಗ್ರಾಮದ ಪ್ರೌಢಶಾಲೆಗೆ ಮಕ್ಕಳು ನಡೆದೇ ಹೋಗಬೇಕಿದೆ. ಆಸ್ಪತ್ರೆ, ಇತರ ಕೆಲಸಗಳಿಗೂ ನಡೆಯುವುದು ಬಿಟ್ಟರೇ ವಿಧಿಯಿಲ್ಲ..!
ಮಾಧ್ಯಮಗಳ ಮೈಕ್ ಮುಂದೆ ಹಸಿ ಹಸಿ ಸುಳ್ಳು ಹೇಳುತ್ತಾ, ಬಿಲ್ಡಪ್ ಕೊಡುವ ಲಾಡ್ ಅವರೇ, ಕೆ.ಹುಣಸಿಕಟ್ಟಿ ಜನರ ಸಾರಿಗೆ ಸಮಸ್ಯೆ ಕುರಿತು ಚರ್ಚೆ ಆಗಬೇಕಲ್ವಾ.! ಇಲ್ಲದ ಉಸಾಬರಿಯತ್ತ ಗಮನ ಹರಿಸುವ ತಾವು, ಈ ಬಗ್ಗೆ ಗಮನ ಹರಿಸಿಲ್ಲ ಯಾಕೆ.? ಅಥವಾ ಕ್ಷೇತ್ರದ ಜನರು ಅಂದ್ರೆ ಅಷ್ಟೊಂದು ನಿಕೃಷ್ಟವಾ? ಎಂದು ಬಿಜೆಪಿ ಟೀಕಾಪ್ರಹಾರ ಮಾಡಿದೆ.