ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಐತಿಹಾಸಿಕ ಹಿನ್ನೆಲೆಯುಳ್ಳ ಸಪ್ತ ಮಾತೃಕಾ ಮಾರಿಯಮ್ಮ ದೇವಿಯ ಕರಗ ಮಹೋತ್ಸವ ಮೇ-12 ರಂದು ನೆಲೆಯಲ್ಲಿದ್ದು ಮೇ 11 ರಂದು ಹಸಿ ಕರಗ ಮಹೋತ್ಸವ ಶ್ರದ್ಧಾಭಕ್ತಿಗಳಿಂದ ನೆರವೇರಿಸಲಾಯಿತು.
ದೊಡ್ಡಬಳ್ಳಾಪುರ ನಗರದ ವನ್ನಿಗರ ಪೇಟೆಯಲ್ಲಿರುವ ಸಪ್ತ ಮಾತೃಕಾ ಮಾರಿಯಮ್ಮ ದೇವಿಯ ಕರಗದ ಅಂಗವಾಗಿ 11 ರಂದು ಮುಂಜಾನೆ ಸುಮಾರು 4:15 ಸರಿಯಾಗಿ ಹಸಿ ಕರಗ ಮಹೋತ್ಸವ ನೇರವೇರಿಸಿದರು ಇದರ ಅಂಗವಾಗಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಸೋಮವಾರ ಬೆಳಗ್ಗೆಯಿಂದ ಸಪ್ತಮಾತೃಕಾ ಮಾರಿಯಮ್ಮ ದೇವಿಗೆ ಅಭಿಷೇಕ, ಲಲಿತಾ ಸಹಸ್ರನಾಮ, ಪ್ರಸಾದ ವಿನಿಯೋಗ, ರಾತ್ರಿ 9:45ಕ್ಕೆ ಪೂಜಾರಿ ಮುನಿರತ್ನಂ ಬಾಲಾಜಿ ಅವರು ಕರಗ ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಡಲಿದ್ದಾರೆ ಎಂದು ದೇವಾಲಯದ ಅಡಳಿತ ಮಂಡಲಿ ತಿಳಿಸಿದ್ದಾರೆ.