ಚಂದ್ರವಳ್ಳಿ ನ್ಯೂಸ್, ಭರಮಸಾಗರ:
ಭರಮಸಾಗರ ಹೋಬಳಿ ಚಿಕ್ಕೇನಹಳ್ಳಿ ಗ್ರಾಮದ ಗುರು ಸಿದ್ದಪ್ಪನವರ ಪತ್ನಿ ಶರಣೆ ಚಂದ್ರಮ್ಮ (85) ಇವರು ಸೋಮವಾರ ನಿಧನರಾಗಿದ್ದಾರೆ.
ಮೃತ ಚಂದ್ರಮ್ಮ ಇವರು ಪತಿ ಗುರುಸಿದ್ದಪ್ಪ ಸೇರಿದಂತೆ ಮೂರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಫೆ.11 ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಚಂದ್ರಮ್ಮ ಇವರ ತೋಟದಲ್ಲಿ ನೆರವಿರಲಿದೆ ಎಂದು ಕುಟುಂಬದ ಮಹೇಶ್ ತಿಳಿಸಿದ್ದಾರೆ. ಸಾಂತ್ವನ: ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಆರ್. ಕೃಷ್ಣಮೂರ್ತಿ, ನರಸಿಂಹರಾಜ್, ತಾಲ್ಲೂಕು ಕೆಡಿಪಿ ಸದಸ್ಯ ಬಿ.ಕೆ.ವಿಜಯಕುಮಾರ್ ರವರು ಮೃತ ಚಂದ್ರಮ್ಮ ನಿವಾಸಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ದುಃಖ ಬರಿಸಲಿ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.