ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಯ ಹದಿಮೂರು ಗ್ರಾಮಗಳ 1.777ಎಕರೆ ಭೂಮಿಯನ್ನು ಕೆ. ಐ. ಎ. ಡಿ. ಬಿ. ಯು ಸ್ವಾದೀನ ಮಾಡಿಕೊಳ್ಳುವುದನ್ನು ಕೈ ಬಿಟ್ಟಿರುವ ಸರ್ಕಾರದ ನಿಲುವು ಸ್ವಾಗತಾರ್ಹ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿ. ಶರತ್ ಪಟೇಲ್ ಹೇಳಿದ್ದಾರೆ.
ಭೂ ಸ್ವಾದೀನ ಕೈ ಬಿಟ್ಟಿರುವ ಕಾಂಗ್ರೆಸ್ ಸರ್ಕಾರ ತಾನು ಯಾವತ್ತೂ ರೈತ ಪರ ಎಂಬುದನ್ನು ತೋರಿಸಿಕೊಟ್ಟಿದೆ. ರಾಜ್ಯದ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಪಾತ್ರ ಬಹು ಮುಖ್ಯ. ಆದರೆಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕರಣಕ್ಕೆ ಉಪಯೋಗಿಸುವುದು ಅಷ್ಟು ಸಮಂಜಸವಲ್ಲ. ಕೈಗಾರಿಕೆ ಹಾಗೂ ಇನ್ನಿತರ ಕಾರಣಗಳಿಗಾಗಿ ಕೃಷಿ ಭೂಮಿ ಕಳೆದುಕೊಂಡ ಅದೆಷ್ಟೋ ರೈತ ಕುಟುಂಬಗಳು ಬೀದಿಗೆ ಬಂದಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.
ಇವೆಲ್ಲವನ್ನೂ ಮನಗಂಡು ರೈತರ ಹಿತಾಸಕ್ತಿ ಸಲುವಾಗಿ ಸುಮಾರು ಮುರುವರ್ಷಗಳ ದೀರ್ಘ ಕಾಲದ ರೈತರ ಹೋರಾಟಕ್ಕೆ ಪ್ರತಿಫಲ ವೆಂಬಂತೆ ಭೂ ಸ್ವಾದೀನ ಪ್ರಕ್ರಿಯೆಯನ್ನು ಕೈ ಬಿಟ್ಟು ರೈತರ ನಿಲುವಿಗೆ ಸರ್ಕಾರ ಬದ್ದವಾಗಿ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಿದೆ.
ನುಡಿದಂತೆ ನಡೆದ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಬಡವರ ಪರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಒಟ್ಟಾರೆ ರೈತರ ನೋವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಹೆಚ್. ಮುನಿಯಪ್ಪನವರು ಅಭಿನಂದನಾರ್ಹರು ಎಂದು ಶರತ್ ಪಟೇಲ್ ಹೇಳಿದರು.