ಸಂಚಲನ ಸೃಷ್ಟಿಸಿದ ಸೀರೆ ಸಂತೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಮೂರು ದಿನಗಳ ಸೀರೆ ಸಂತೆ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗಿದ್ದು
, ಶುಕ್ರವಾರ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ಭಾನುವಾರ ಮುಕ್ತಾಯ ಗೊಳ್ಳಲಿದೆ.
ದೊಡ್ಡಬಳ್ಳಾಪುರ ಸೀರೆಗಳ ಮಾರಾಟಕ್ಕೆಂದು ಕಾರ್ಯಕ್ರಮ ಅಯೋಜನೆ ಮಾಡಲಾಗಿದ್ದು
, ಸೀರೆ ಸಂತೆಯಲ್ಲಿ ದೊಡ್ಡಬಳ್ಳಾಪುರ ನೇಕಾರರು ತಾವು ನೇಯ್ದ ಸೀರೆಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು. ಸುಮಾರು 75 ಸೀರೆ ಮಾರಾಟ ಮಳಿಗೆಗಳನ್ನು ವ್ಯವಸ್ಥೆ ಮಾಡಲಾಗಿತ್ತು.ಮೊದಲ ದಿನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು ನೇಕಾರರಿಗೆ ಆಶಾ ಭಾವನೆ ಮೂಡಿಸಿದೆ.

ಸೀರೆ ಸಂತೆ ಅಯೋಜನೆ ಮಾಡುವ ಮೂಲಕ ದೊಡ್ಡಬಳ್ಳಾಪುರ ಬ್ರಾಂಡ್ ಸೃಷ್ಟಿ ಮಾಡಿ ರಾಜ್ಯದ ದೇಶ ವಿದೇಶ ಮೂಲೆ ಮೂಲೆಗೂ ತಲುಪಿಸುವ ಉದ್ದೇಶದಿಂದ ಸಾಕಷ್ಠು ಪ್ರಚಾರ ಮಾಡಿ ಇಲ್ಲಿನ ನೇಕಾರಿಕೆ ಅಭಿವೃದ್ದಿ ಪಡಿಸಲಾಗುವುದು ಎಂದು ಶಾಸಕ ದೀರಜ್ ಮುನಿರಾಜು ತಿಳಿಸಿದರು.

- Advertisement - 

ದೊಡ್ಡಬಳ್ಳಾಪುರ  ಸೀರೆ ಸಂತೆಗೆ ನಿನ್ನೆ ಶುಕ್ರವಾರ ಸಂಜೆ ಚಾಲನೆ ನೀಡಲಾಗಿದ್ದು, ಮೊದಲ ದಿನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ, 4500 ಸೀರೆಗಳ ಮಾರಾಟವಾಗಿದ್ದು, ಒಟ್ಟು 70 ಲಕ್ಷ ದಿಂದ 80 ಲಕ್ಷ ದಷ್ಠು ವಹಿವಾಟು ನಡೆದಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ  ಭಾರತದ ಮ್ಯಾಂಚೆಸ್ಟರ್ ಎಂದೇ  ಪ್ರಖ್ಯಾತಿ ಗೊಂಡಿದೆ.ನೇಕಾರಿಕೆ ಇಲ್ಲಿನ ಮೂಲ ವೃತ್ತಿ, ಇತ್ತಿಚೇಗೆ ಸೂರತ್ ಸೀರೆಗಳಿಂದ ಇಲ್ಲಿನ ನೇಕಾರಿಕೆ ನೆಲಕಚ್ಚಿತ್ತು. ಇದರಿಂದ ನೇಕಾರರು ಸಂಕಷ್ಟದಲ್ಲಿದ್ದರು. ದೊಡ್ಡಬಳ್ಳಾಪುರ ಸೀರೆಗಳಿಗೆ ಮಾರುಕಟ್ಟೆಯನ್ನ ಕಲ್ಪಿಸ ಬೇಕೆನ್ನುವ ಕಾರಣಕ್ಕೆ ದೊಡ್ಡಬಳ್ಳಾಪುರ ಸೀರೆ ಸಂತೆ ಕಾರ್ಯಕ್ರಮವನ್ನು ಶಾಸಕರಾದ ಧೀರಜ್ ಮುನಿರಾಜು ಅಯೋಜನೆ ಮಾಡಿದ್ದಾರೆ.

- Advertisement - 

ದೊಡ್ಡಬಳ್ಳಾಪುರ ಸೀರೆ ಸಂತೆ ಸಮಿತಿ ಅಧ್ಯಕ್ಷ ಪಿ.ಸಿ.ವೆಂಕಟೇಶ್,ಮಾತನಾಡಿ ಮೊದಲ ದಿನವಾದ ಶುಕ್ರವಾರ 4500 ಸೀರೆಗಳು ಮಾರಾಟವಾಗಿದೆ, ಸುಮಾರು 70 ಲಕ್ಷ ವಹಿವಾಟು ನಡೆದಿದೆ. 75 ಸೀರೆ ಮಾರಾಟ ಮಳಿಗೆಗಳಿದ್ದು ಮಧ್ಯಾಹ್ನದಿಂದನೇ ಮಾರಾಟ ಪ್ರಕ್ರಿಯೆ ಆರಂಭವಾಗಿತ್ತು.

ದೊಡ್ಡಬಳ್ಳಾಪುರ ಸುತ್ತಮುತ್ತಲಿನ ಊರುಗಳಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ಬೆಂಗಳೂರು ಮತ್ತು ಗೌರಿಬಿದನೂರು ಭಾಗದಿಂದ ಹೆಚ್ಚಿನ ಜನರು ಸೀರೆ ಸಂತೆಗೆ ಭೇಟಿ ನೀಡಿ ಸೀರೆಗಳ ಖರೀದಿ ಮಾಡಿದ್ದಾರೆ.1 ಸಾವಿರದಿಂದ 15 ಸಾವಿರ ಬೆಲೆಯ ಸೀರೆಗಳು ಮಳಿಗೆಗಳಲ್ಲಿ ಹೆಚ್ಚು ಮಾರಾಟವಾಗಿದೆ ಎಂದರು.

ಕಲರ್ ಕನ್ನಡದ ಬಿಗ್ ಬಾಸ್ 12 ಅವೃತ್ತಿಯ ವಿಜೇತ  ಗಿಲ್ಲಿ ನಟ  ದೊಡ್ಡಬಳ್ಳಾಪುರ ಸೀರೆ ಸಂತೆ”  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ  ಆಗಮಿಸಿ ಮೆರಗು ತಂದರು.

ಗಿಲ್ಲಿ ನಟನನ್ನು ಕಣ್ಣು ತುಂಬಿ ಕೊಂಡು ಹರ್ಷೋದ್ಘಾರ ವ್ಯಕ್ತಪಡಿಸಿದರು. ನಂತರ ಗಿಲ್ಲಿ ನಟ ಮಾತನಾಡಿ, ದೊಡ್ಡಬಳ್ಳಾಪುರ ಜನತೆ ಮನಸ್ಸು ಬಹಳ ದೊಡ್ಡದು. ಇಲ್ಲಿನ ಸೀರೆ ಉತ್ತಮ ಗುಣಮಟ್ಟ ವಾಗಿದ್ದು ನೇಕಾರಿಗೆ ಈ ವೇದಿಕೆ ಇದು ಅವಕಾಶವಾಗಿದೆ ಶಾಸಕ ದೀರಜ್ ಮುನಿರಾಜ್ ಸೀರೆ ಸಂತೆ ಮಾಡುವ ಮೂಲಕ ನೇಕಾರರ ಶ್ರಮಕ್ಕೆ ಪ್ರತಿಫಲವಾಗಿದೆ ಎಂದರು.

ಈ ಸಂದರ್ಭದಲ್ಲಿ ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್, ರೇಷ್ಮೆ ಮಂಡಲಿಯ ಮಾಜಿ ಅಧ್ಯಕ್ಷ ಕೆ. ಎಂ. ಹನುಮಂತರಾಯಪ್ಪ, ನಗರಸಬಾ ಸದಸ್ಯರು  ಸೀರೆ ಸಂತೆ ಆಯೋಜನೆ ಸಮಿತಿಯ ಸದಸ್ಯರು  ಸೇರಿದಂತೆ ಇತರರು ಹಾಜರಿದ್ದರು.

 

Share This Article
error: Content is protected !!
";