ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಭಿನಯ ಸರಸ್ವತಿ ಎಂದೇ ಪ್ರಖ್ಯಾತರಾಗಿದ್ದ ಕನ್ನಡದ ಹಿರಿಯ ನಟಿ ಶ್ರೀಮತಿ ಡಾ. ಬಿ. ಸರೋಜಾ ದೇವಿ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಜೆಡಿಎಸ್ ಸಂತಾಪ ಸೂಚಿಸಿದೆ.
ಡಾ. ರಾಜ್‌ಕುಮಾರ್ ಸೇರಿದಂತೆ ಹಲವು ಘಟಾನುಘಟಿ ನಟರೊಂದಿಗೆ ಪೌರಾಣಿಕ ಚಿತ್ರಗಳಲ್ಲಿ ಅಭಿನಯಿಸಿ ಪಾತ್ರಗಳಿಗೆ ಜೀವ ತುಂಬಿದ್ದ ಶ್ರೇಷ್ಠ ಅಭಿನೇತ್ರಿ. ಅವರ “ರಾಣಿ ಚೆನ್ನಮ್ಮ” ಪಾತ್ರ ಎಂದೆಂದಿಗೂ ಅಜರಾಮರ. ಕನ್ನಡಿಗರ ಮನೆ ಮಾತಾಗಿ “ಚಂದನವನ”ವನ್ನು ಬೆಳಗಿದ ಮಹಾನಟಿ.
ಬಹುಭಾಷಾ ನಟಿಯಾಗಿ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಸಿನಿರಸಿಕರ ಮನ ಗೆದ್ದಿದ್ದರು. ಭಾರತೀಯ ಚಿತ್ರರಂಗದಲ್ಲಿ ಮಾಡಿರುವ ಅಮೋಘ ಸಾಧನೆಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಒಲಿದಿತ್ತು ಎಂದು ಜೆಡಿಎಸ್ ತಿಳಿಸಿದೆ.
ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬಸ್ಥರು, ಅಭಿಮಾನಿಗಳು, ಆಪ್ತರಿಗೆ ದುಖಃವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಜೆಡಿಎಸ್ ಪ್ರಾರ್ಥಿಸಿದೆ.