ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕಳೆದ ನಾಲ್ಕು ದಶಕಗಳ ಕಾಲ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿಕೊಂಡು ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಕಾನೂನಿನ ಮೂಲಕ ನ್ಯಾಯಾಲಯದಲ್ಲಿ ಯಾವುದೇ ತೊಡಕಿಲ್ಲದೆ ಜಯ ಲಭಿಸಿ ರಾಜ್ಯದಲ್ಲಿ ಇನ್ನೂ ಮೂರುವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯುವ ಮೂಲಕ ಶೋಷಿತ, ಅಲ್ಪಸಂಖ್ಯಾತ ಹಾಗೂ ದೀನ ದಲಿತರ ಪರ ಸೇವೆ ಮಾಡುವ ಅವಕಾಶವನ್ನು ಆ ದೇವರು ಕರುಣಿಸಲಿ ಎಂಬುದಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಪತ್ನಿ ಶಶಿಕಲಾ ಹಾಗೂ ಅವರ ತಂಡ ಜಮ್ಮುವಿನ ಕಟ್ರಾ ದಿಂದ ಸುಮಾರು ಹದಿಮೂರು ಕಿ.ಮೀ ದೂರದಿಂದ ಕಾಲ್ನೆಡಿಗೆ ಮೂಲಕ ಶ್ರೀಶಕ್ತಿ ಮಾತೆ ಶ್ರೀವೈಷ್ಣವಿ ಮಾತಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಸಮರ್ಥಿಸಿ ತಮ್ಮ ಕೋರಿಕೆ ಈಡೇರಿಸುವಂತೆ ದೇವಿಗೆ ಬೇಡಿ ಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಹಿರಿಯೂರು ನಗರಸಭೆ ಅಧ್ಯಕ್ಷ ಅಜ್ಜಪ್ಪ, ಸದಸ್ಯರಾದ ಜಗದೀಶ್, ಬಬ್ಬೂರು ಗೌರೀಶ, ಮುಖಂಡರಾದ ಉಮೇಶ, ಚನ್ನಕೇಶವ ಮುಂತಾದವರು ಸಂದರ್ಭದಲ್ಲಿ ಹಾಜರಿದ್ದರು.