ಸಾವಿನಲ್ಲೂ ಒಂದಾದ ಸತಿ-ಪತಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೃದಯಾಘಾತದಿಂದ ಪತಿ ಪತ್ನಿ ಇಬ್ಬರು ಸಾವನ್ನಪ್ಪಿರುವ ಘಟನೆ ನಗರದ ಕೆಳಗೋಟೆ ಬಡಾವಣೆಯಲ್ಲಿ ಸಂಭವಿಸಿದ್ದು ಸಾವಿನಲ್ಲೂ ದಂಪತಿಗಳು ಒಂದಾಗಿದ್ದಾರೆ.

 ನಿವೃತ್ತ ಲೈಬ್ರರಿಯನ್ ಆಗಿದ್ದ ಓಂಕಾರಮೂರ್ತಿ ಅವರಿಗೆ ಸೋಮವಾರ ಬೆಳಗ್ಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಪತಿಯ ಹೃದಯಾಘಾತದ ವಿಷಯ ಪತ್ನಿ ದ್ರಾಕ್ಷಾಯಣಿ ಅವರಿಗೂ ತಿಳಿಯುತ್ತಿದ್ದಂತೆ ಅವರು ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓಂಕಾರಮೂರ್ತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

ಎಸ್ ಜೆ ಎಂ ವಿದ್ಯಾಪೀಠದಲ್ಲಿ ಮುಖ್ಯ ಗ್ರಂಥಪಾಲಕರಾಗಿ ೩೦ ವರ್ಷ ಕೆಲಸ ಮಾಡಿದ್ದರು. ಬಹಳ ಸೌಮ್ಯ ಸ್ವಭಾವದಿಂದಲೇ ಇಬ್ಬರೂ ಜೀವನ ಮಾಡ್ತಿದ್ದರು. ಇಬ್ಬರು ಹೆಣ್ಣು ಮಕ್ಕಳು ಸಾಫ್ಟ್‌ವೇರ್ ಇಂಜಿನಿಯರ್ಸ್ ಆಗಿದ್ದಾರೆ.

ಬಾವ ಓಂಕಾರಮೂರ್ತಿ ಅವರಿಗೆ ನಾಡಿ ಮಿಡಿತ ಇದ್ದಾಗಲೇ, ನಮ್ಮ ಅಕ್ಕ ದ್ರಾಕ್ಷಾಯಿಣಮ್ಮ ದಿಗ್ಬ್ರಮೆಯಾಗಿ ಅಸುನೀಗಿದ್ದಾಳೆ. ಪ್ರತಿಯೊಬ್ಬ ಮನುಷ್ಯನಿಗೂ ಆಯಸ್ಸು ಇಷ್ಟು ಅಂತ ಇರುತ್ತದೆ. ಈ ರೀತಿ ಘಟನೆ ನಮಗೆ ತುಂಬಾ ನೋವಾಗಿದೆ ಎಂದು ಮೃತ ದ್ರಾಕ್ಷಾಯಿಣಮ್ಮನ ಸಹೋದರ ಲಿಂಗಮೂರ್ತಿ ಭಾವುಕರಾಗಿ ಹೇಳಿದ್ದಾರೆ.

 

- Advertisement -  - Advertisement - 
Share This Article
error: Content is protected !!
";