ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಪಂಜಾಬ್ನ ಗುರುಕಾಶಿ ವಿಶ್ವವಿದ್ಯಾನಿಲಯದ ಭಟಿಂಡ ಕ್ರೀಡಾಂಗಣದಲ್ಲಿ ಮಾ.೧೪ ರಿಂದ ೧೬ ರವರೆಗೆ ಮೂರು ದಿನಗಳ ಕಾಲ ನಡೆದ ೪೫ ನೆ ರಾಷ್ಟ್ರಮಟ್ಟದ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಸತೀಶ್ಕುಮಾರ್ ಯು. ನೂರು ಮೀಟರ್ ಓಟದಲ್ಲಿ ಎರಡನೆ ಸ್ಥಾನ, ಇನ್ನೂರು ಮೀ. ಓಟದಲ್ಲಿ ಮೊದಲ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಚಿತ್ರದುರ್ಗದಲ್ಲಿ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿರುವ ಸತೀಶ್ಕುಮಾರ್ ಯು. ಐವತ್ತು ವರ್ಷದೊಳಗಿನ ಮೇಲ್ಪಟ್ಟವರಿಗಾಗಿ ನಡೆದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಐದು ಪ್ರಶಸ್ತಿ ಪದಕಗಳನ್ನು ಬಾಚಿಕೊಂಡು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

