ಚಂದ್ರವಳ್ಳಿ ನ್ಯೂಸ್, ಹೊಸಪೇಟೆ:
ವಿಜಯನಗರ ನಗರದ ಚಿತ್ರಕೇರಿ ಕಾರ್ಯಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ 300000 ರೂ ಪ್ರಗತಿ ನಿಧಿ ಪಡೆದುಕೊಂಡು ಹೊಸದಾಗಿ ಆಟೋರಿಕ್ಷಾ ಖರೀದಿ ಮಾಡಿದಂತಹ ಸಂಸ್ಥೆಯ ಪಾಲುದಾರ ಸದಸ್ಯೆ ಪ್ರೇಮ ಅವರಿಗೆ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಅವರು ಈ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಪ್ರತಿಯೊಬ್ಬ ಪಾಲುದಾರ ಸದಸ್ಯರು ಕೂಡ ಇವರ ಹಾಗೆ ಸಂಘದಿಂದ ಪಡೆದುಕೊಂಡ ಪ್ರಗತಿ ನಿಧಿಯನ್ನು ಒಳ್ಳೆಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡರೆ ಪ್ರಗತಿ ನಿಧಿ ಶಬ್ದಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ತಿಳಿಸಿದರು.
ಸದರಿ ಸದಸ್ಯರಿಗೆ ಒಳ್ಳೆಯ ಆದಾಯ ಲಭಿಸಲಿ ಮತ್ತು ಅವರ ಕುಟುಂಬಕ್ಕೆ ಮಂಜುನಾಥ ಸ್ವಾಮಿಯ ಹಾಗೂ ಪರಮಪೂಜ್ಯ ಖಾವಂದರ ಆಶೀರ್ವಾದ ಸದಾ ಕಾಲ ಇರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಎಂಐಎಸ್ ಯೋಜನಾಧಿಕಾರಿ ಶಿಲ್ಪ, ತಾಲೂಕು ಯೋಜನಾಧಿಕಾರಿ ಮಾರುತಿ.ಎಸ್, ಹಣಕಾಸು ಪ್ರಬಂಧಕ ಸುನಿಲ್ ವಲಯದ ಮೇಲ್ವಿಚಾರಕ ಶರಣ ಬಸವ ಉಪಸ್ಥಿತರಿದ್ದರು.