ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಹಿಳೆಯರು ಪುರುಷ ಸಮಾನರಾಗಿ ಬೆಳೆಯಲು ಹೋರಾಟ ಮಾಡಿ ಶೋಷಿತ ವರ್ಗ ಹಾಗು ಹೆಣ್ಣು ಮಕ್ಕಳಿಗೆ ಅಕ್ಷರ ಜ್ಞಾನ ನೀಡುವುದರ ಮೂಲಕ ದೇಶದಲ್ಲಿ ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ಎಂದು ಪ್ರಜಾ ವಿಮೋಚನಾ ಚಳವಳಿ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ಹೇಳಿದರು.
ನಗರದ ಕನ್ನಡ ಜಾಗೃತಿ ಭವನದಲ್ಲಿ ಅ ಯೋಜನೆ ಮಾಡಲಾದ ಸಾವಿತ್ರಿ ಬಾಯಿ ಪುಲೆಯವರ ಜನ್ಮ ದಿನಾಚರಣೆ ಅಂಗವಾಗಿ ಡಾ. ಬಿ ಆರ್ ಅಂಬೇಡ್ಕರ್ ಹಾಗು ಸಾವಿತ್ರಿ ಬಾಯಿ ಪುಲೆ ಯವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಮಾತನಾಡಿ ಸಾವಿತ್ರಿ ಬಾಯಿ ಪುಲೆ ಯವರು ಮಹಾರಾಷ್ಟ್ರ ರಾಜ್ಯದ ಸಾತಾರ ಜಿಲ್ಲೆಯ ನಾಯಗಾಂವ ಗ್ರಾಮದಲ್ಲಿ ಖಂಡೋಜ ನೇವಸೆ ಪಾಟೀಲ ಮತ್ತು ಲಕ್ಷ್ಮೀಬಾಯಿ ಯವರಿಗ 1831 ಜನವರಿ 3 ರಂದು ಜನಸಿದರು ಬಾಲ್ಯದಲ್ಲಿ ವಿವಾಹ ವಾಗಿತ್ತು ಅದರೆ ವಿದ್ಯೆಯ ಮಹತ್ವವನ್ನು ಮನಗಂಡು ಅವರ ಪತಿ ಮನೆಯಲ್ಲಿಯೇ ಅಕ್ಷರದ ಅಭ್ಯಾಸವನ್ನು ಮಾಡಿಸಿದರು ನಂತರ 1847ರಲ್ಲಿ ಶ್ರೀಮತಿ ಮಿಚಲ್ಲ್ ನಾರ್ಮನ್ನ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ನೀಡಿದರು ಶಿಕ್ಷಣ ತಮ್ಮ ಹಕ್ಕು ಎಂದು ತಿಳಿದು ಹೆಣ್ಣು ಮಕ್ಕಳು ಪುರುಷ ಸಮಾನರಾಗಿ ಎಲ್ಲಾ ಕ್ಷೇತ್ರದಲ್ಲಿ ಬೆಳೆಯಲು ಸಾವಿತ್ರಿ ಬಾಯಿ ಪುಲೆ ಮಾದರಿಯಾಗಿದ್ದಾರೆ ಎಂದರು
ನಂತರ ಮಾತನಾಡಿದ ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ವಿ ಶಾಂತ ಕುಮಾರ್ ಮಾತನಾಡಿ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕಾಗಿ ಹೋರಾಟ ಮಾಡಿ ಶೋಷಿತ ವರ್ಗದವರಿಗೆ ಶಿಕ್ಷಣಕ್ಕಾಗಿ ಆಪಾರ ಕೊಡುಗೆ ನೀಡಿದ್ದಾರೆ
ಭಾರತ ದೇಶದ ಸ್ವತಂತ್ರ್ಯ ಸಂಗ್ರಾಮಕ್ಕೂ ಮೊದಲೇ ಇವರು ಅಕ್ಷರ ಕ್ರಾಂತಿಗೆ ಅರಂಬಿಸಿದರು ಶೋಷಿತ ವರ್ಗದವರಿಗೆ ಶಿಕ್ಷಣಕ್ಕಾಗಿ ಬಹಳಷ್ಟು ಅವಮಾನಗಳನ್ನು ಅನುಭವಿಸಿದರು ಶಿಕ್ಷಕಿಯಾಗಿ ಶಾಲೆಗೆ ಹೋಗ ಬೇಕಾದರೆ ತಡೆಯಲು ಮೇಲ್ಜಾತಿಯವರು ದಾರಿಯಲ್ಲಿ ಕೆಸರು ನೀರು ಎರಚಿ ಆವ್ಯಾಚ ಶಬ್ದದಿಂದ ನಿಂದಿಸಿ ಇಂತಹ ಕಷ್ಟದಲ್ಲಿಯೂ ಅವರು ಎಲ್ಲವನ್ನು ಮೆಟ್ಟಿ ಈ ಸಮಾಜಕ್ಕೆ ಅಕ್ಷರ ಜ್ಞಾನ ನೀಡುವುದರ ಮೂಲಕ ಮಾದರಿಯಾಗಿದ್ದಾರೆ ಎಂದರು.
ಸಾಧಕರಿಗೆ ಸನ್ಮಾನ-ಶ್ರೀಮತಿ ಮಂಜುಳ ಮುಖ್ಯ ಶಿಕ್ಷಕಿ ಶ್ರೀಮತಿ ರಂಗಮ್ಮ ಶ್ರೀಮತಿ ಚಂದ್ರಕಲಾ ಶ್ರೀಮತಿ ಸರಸ್ವತಿ ಶ್ರೀಮತಿ ಮಮತ ಹನಕಮಂತರಾಯಪ್ಪ ಶಿಕ್ಷಣ ಕ್ಷೇತ್ರದಲ್ಲಿ ಸಾದನೆ ಮಾಡಿರುವವರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಜಾ ವಿಮೋಚನಾ ಚಳವಳಿಯ ಜಿಲ್ಲಾಧ್ಯಕ್ಷ ರಾಘವೇಂದ್ರ ತಾಲ್ಲೂಕು ಅಧ್ಯಕ್ಷ ಹೆಚ್ ಶಿವಕುಮಾರ್ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಅದೋರು ದೇವರಾಜ್ ರಬಿಯಾ ಬೇಗಂ ವಿಜಯಕುಮಾರ್ ಸಬ್ ಮಂಗಲ ರವಿ ಮಾದೇಶ್ ಹೊನ್ನಪ್ಪ ಎ ಗಣೇಶ್ ಪರಶುರಾಮ್ ಮತ್ತಿತರರು ಹಾಜರಿದ್ದರು.