ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂವಿಧಾನ ರಕ್ಷಿಸುತ್ತೇವೆ ಎಂದು ಸಂವಿಧಾನ ಪುಸ್ತಕ ಹಿಡಿದು ಸಂಸತ್ತಿನಲ್ಲಿ ಶೋ ಆಫ್‌ಕೊಡುವ ಇಟಲಿ ಮೂಲದ ಕಾಂಗ್ರೆಸ್‌ವರಿಷ್ಠರೇ, ಎಸ್‌ಸಿ- ಎಸ್‌ಟಿ ಜನರ ಸಮಸ್ಯೆಗಳ ಪರ ಧ್ವನಿ ಎತ್ತುವ ನಾಯಕರನ್ನು ತುಳಿಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್ ವಾಕ್ಸಮರ ಸಾರಿದೆ.
ರಾಜ್ಯದಲ್ಲಿ ಎಸ್‌ಸಿ-ಎಸ್‌ಟಿ ನಾಯಕರು ಸಭೆ ಸೇರುವುದಕ್ಕೂ ಇಟಲಿ ಕಾಂಗ್ರೆಸ್ ಅಪ್ಪಣೆ ಬೇಕಾ? ಹೈಕಮಾಂಡ್‌ಹೇಳಿ-ಕೇಳಿಯೇ ಸಭೆ-ಸಮಾರಂಭಗಳನ್ನು ಮಾಡಬೇಕಾ ? ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.
ಪರಿಶಿಷ್ಟ ಸಮುದಾಯಗಳ ಸಮಸ್ಯೆಗಳ ಪರವಾಗಿ ಧ್ವನಿ ಎತ್ತುವ ಸಲುವಾಗಿ ಚರ್ಚೆ ಮಾಡುವುದೂ ಮಹಾ ಅಪರಾಧವೇ ? ಸಭೆ ಮಾಡಬಾರದು ಎನ್ನುವ ವರಿಷ್ಠರ ಸೂಚನೆ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳ ಜನರಿಗೆ ಮಾಡುತ್ತಿರುವ ಅಪಮಾನ ಅಲ್ಲವೇ ?ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಇಟಲಿ ಕೇಂದ್ರಿತ ವರಿಷ್ಠರು ರಾಜ್ಯ ಕಾಂಗ್ರೆಸ್‌ನಾಯಕರನ್ನು ಗುಲಾಮರಂತೆ ಇಷ್ಟು ಕೀಳು ಮಟ್ಟದಲ್ಲಿ ನಡೆಸಿಕೊಳ್ಳುತ್ತಿರುವುದು ಸರಿಯಲ್ಲ. ದಲಿತ ನಾಯಕರ ಅಧಿಕಾರ, ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು ಯಾವ ರೀತಿಯಲ್ಲಿ ಸಂವಿಧಾನ ರಕ್ಷಣೆಯಾಗಿದೆ.
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್‌ಬಿ.ಆರ್. ಅಂಬೇಡ್ಕರ್‌ಅವರನ್ನು ಹೀನಾಯವಾಗಿ ನಡೆಸಿಕೊಂಡು, ರಾಜಕೀಯವಾಗಿ ತುಳಿದ ಇಟಲಿ ಕಾಂಗ್ರೆಸ್ಸಿಗರಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ.! ಎಂದು ಜೆಡಿಎಸ್ ವ್ಯಂಗ್ಯವಾಡಿದೆ.