ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಶ್ರೀ ಪಾರ್ಶ್ವನಾಥ ಶಾಲೆಯಲ್ಲಿ ಶನಿವಾರ ಸಂಕ್ರಾಂತಿ ಸಂಭ್ರಮ ಆಚರಣೆ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂಬ ಸಂದೇಶ ತಿಳಿಸುವ ಸಂಸ್ಕೃತಿ ಬಿಂಬಿಸುವ ಸುಗ್ಗಿಯ ಹಬ್ಬ ಸಂಕ್ರಾಂತಿಯನ್ನು ಚಿತ್ರದುರ್ಗ ನಗರದ ಶ್ರೀ ಪಾರ್ಶ್ವನಾಥ ಶಾಲೆಯ ಆವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಮಕ್ಕಳು ದೇಸಿ ಸಂಸ್ಕೃತಿ ಬಿಂಬಿಸುವ ವೇಷಭೂಷಣ ಧರಿಸಿ ಸುಗ್ಗಿಯ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಬೀಸುವಕಲ್ಲು, ನೇಗಿಲು, ಬಣವೆ, ರಾಗಿಯ ರಾಶಿ, ಎತ್ತಿನ ಗಾಡಿ ಹಳ್ಳಿಯ ಸೊಬಗನ್ನು ಬಿಂಬಿಸುವ ರೂಪಕಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಉತ್ತಮ ಚಂದ್ ಸುರಾನ, ಕಾರ್ಯದರ್ಶಿ ಸುರೇಶ ಕುಮಾರ್ ಸಿಸೋಡಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಯಿನಿ ನಾಜಿಮಾ ಸ್ವಲೇಹಾ, ಶಿಕ್ಷಕಕಿಯರಾದ ವಿಜಯಲಕ್ಷ್ಮಿ, ಶಾಂತಕುಮಾರಿ ಹಾಗೂ ಬೋಧಕ ಬೋಧಕೇತರ ವರ್ಗ ಹಾಗೂ ಪೋಷಕರು ಭಾಗವಹಿಸಿದ್ದರು.