ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಐತಿಹಾಸಿಕ ಶ್ರೀ ಘಾಟಿ ಸುಬ್ರಮಣ್ಯ ಸ್ವಾಮಿಯ ಬ್ರಹ್ಮ ರಥೋಥ್ಸವದ ಅಂಗವಾಗಿ ನಡೆಯುತ್ತಿರುವ ಬಾರೀ ದನಗಳ ಜಾತ್ರೆಯಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಾದ
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ರಾಮನಗರ, ಕೋಲಾರ ಮತ್ತು ನೆರೆ ರಾಜ್ಯಗಳಿಂದಲೂ ಎತ್ತುಗಳು ಭಾಗವಹಿಸಿದ್ದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಹನುಮಂತರಾಯ ಮೇವು ಮತ್ತು ನೀರನ್ನು ಉಚಿತವಾಗಿ ವಿತರಿಸಿದರು.
ಅವರು ಜಾತ್ರೆಯಲ್ಲಿ ಭಾಗವಹಿಸಿ ವಿವಿದ ರೀತಿಯ ತಳಿಗಳ ಹೋರಿಗಳನ್ನು ವೀಕ್ಷಿಸಿ, ಜಾತ್ರೆಯಲ್ಲಿ ಭಾಗವಹಿಸಿದ್ದ 5೦ ಜನ ರೈತರಿಗೆ ಬೇಸಿಗೆಯಲ್ಲಿ ರಾಸುಗಳಿಗೆ ಮೇವು ನಿರ್ವಹಣೆ ಎಂದರೆ ಅವುಗಳಿಗೆ ವರ್ಷವಿಡೀ ಪೌಷ್ಟಿಕಾಂಶಭರಿತ, ಸಮತೋಲಿತ ಆಹಾರ ನೀಡುವುದು.
ಇದರಲ್ಲಿ ಹಸಿರು ಮೇವು, ಒಣ ಮೇವು, ಮತ್ತು ಸಾಂದ್ರೀಕೃತ ಆಹಾರದ ಸರಿಯಾದ ಮಿಶ್ರಣ ಮುಖ್ಯ. ಹವಾಮಾನಕ್ಕೆ ಅನುಗುಣವಾಗಿ, ಸಿಲೇಜ್, ಅಜೋಲ್ಲಾದಂತಹ ಪರ್ಯಾಯ ಮೇವು ಬಳಸುವುದು, ಮತ್ತು ಬೇಸಿಗೆಯಲ್ಲಿ ವಿಶೇಷ ಕಾಳಜಿ ವಹಿಸುವುದು (ತಂಪು ಪಾನೀಯಗಳು, ಫ್ಯಾನ್‌ಗಳು) ಮುಖ್ಯ. ಇದರಿಂದ ಹಾಲಿನ ಉತ್ಪಾದನೆ ಮತ್ತು ಸಂತಾನೋತ್ಪಾದನೆ ಹೆಚ್ಚಾಗುತ್ತದೆ ಎಂದು ಮಾಹಿತಿಯನ್ನು ನೀಡಿದರು.

