ಚಂದ್ರವಳ್ಳಿ ನ್ಯೂಸ್, ವಿಜಯನಗರ(ಹೊಸಪೇಟೆ):
ಹೂವಿನಹಡಗಲಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜೂ.21 ರಂದು ಬೆಂಗಳೂರಿನ ಬುಹ್ಲರ್ ಇಂಡಿಯಾ ಪ್ರೆ.ಲಿ, ಉದ್ಯಮದವರು ಎಂಎಸ್‌ಪಿಟಿ(ಮಲ್ಟಿ ಸ್ಕಿಲ್ಡ್ ಪ್ರೊಡಕ್ಷನ್ ಟೆಕ್ನಿಷಿಯನ್), ಎಂಎಸ್‌ಡಬ್ಲೂ (ಮೆಕಾಟ್ರಾನಿಕ್ ಸ್ಕೂಲ್ ವಿಂಟರ್‌ಥೂರ್) ಸಹಯೋಗದಲ್ಲಿ 1 ಮತ್ತು 2 ವರ್ಷದ ಕಾಲಾವಧಿಗೆ ಅಪ್ರೆಂಟಿಸ್ ತರಬೇತಿ ಆಯ್ಕೆಗೆ ಆಗಮಿಸುತ್ತಿದ್ದಾರೆ.
ಐಟಿಐನಲ್ಲಿ 2025 ರಲ್ಲಿ ಪರೀಕ್ಷೆ ಬರೆಯುವ ಫಿಟ್ಟರ್, ವೆಲ್ಡರ್, ಎಲೆಕ್ಟ್ರಿಷಿಯನ್, ಮಶಿನಿಷ್ಟ್ ವೃತ್ತಿಗಳಲ್ಲಿ ಉತ್ತೀರ್ಣರಾದವರು ವಯೋಮಿತಿ 18-20 ವರ್ಷದ ಅಸಕ್ತ ಅಭ್ಯರ್ಥಿಗಳು ಜೂ.21ರಂದು ಹಾಜರಾಗಿ ಪ್ರಯೋಜನಪಡೆದುಕೊಳ್ಳಬೇಕು ಎಂದು ಸರ್ಕಾರಿ ಕೈಗಾರಿಕಾ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.