ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಆಯ್ಕೆಪಟ್ಟಿ ಪ್ರಕಟ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಿರುವ 2018ನೇ ಸಾಲಿನ ವಿವಿಧ ನ್ಯಾಯಾಂಗ ಘಟಕಗಳ ಹೈದ್ರಾಬಾದ್-ಕರ್ನಾಟಕ ವೃಂದದ-81 ಹಾಗೂ ಉಳಿಕೆ ಮೂಲ ವೃಂದದ 494 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಶೇಕಡ 10ರಷ್ಟು ವರ್ಗೀಕರಣಕ್ಕೆ ಸೀಮಿತಗೊಳಿಸಿ,

ಹೆಚ್ಚುವರಿ ಆಯ್ಕೆ ಪಟ್ಟಿಗಾಗಿ ಇಲಾಖೆಗಳಿಂದ ಸ್ವೀಕೃತವಾದ ಬೇಡಿಕೆ ಪತ್ರಗಳ ಕಾಲಾನುಕ್ರಮದನುಸಾರ ಉಳಿಕೆ ಮೂಲ ವೃಂದದ 64 ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಹಾಗೂ ಕಟ್‍ಆಫ್ ಅಂಕಗಳ ಪಟ್ಟಿಯನ್ನು ಮತ್ತು ಹೈ.ಕ ವೃಂದದ ಹುದ್ದೆಗಳ ಶೇಕಡ 10ರಷ್ಟು ವರ್ಗೀಕರಣಕ್ಕೆ ಸಿದ್ಧಪಡಿಸಲಾದ ಹೆಚ್ಚುವರಿ ಪಟ್ಟಿ

- Advertisement - 

ಹಾಗೂ 14 ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಮತ್ತು ಕಟ್‍ಆಫ್ ಅಂಕಗಳ ಪಟ್ಟಿಯನ್ನು 2025 ರ ಆಗಸ್ಟ್ 04 ರಂದು ಆಯೋಗದ ವೆಬ್‍ಸೈಟ್ http://kpsc.kar.nic.in  ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ.ವಿಶಾಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

- Advertisement - 

 

 

 

Share This Article
error: Content is protected !!
";