ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾವಾದ ಜಿಲ್ಲಾ ಸಮಿತಿಗೆ ರಾಜ್ಯ ಪ್ರಧಾನ ಸಂಚಾಲಕರಾದ ಎಂ.ಗೋವಿಂದರಾಜುರವರ ಆದೇಶದ ಮೇರೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾಧ್ಯಕ್ಷರಾಗಿ ಕೋದಂಡರಾಮ ಪಿ. ಮಹಿಳಾ ಜಿಲ್ಲಾಧ್ಯಕ್ಷರಾಗಿ ಆರ್.ಭಾಗ್ಯಮ್ಮ, ಮಹಿಳಾ ಘಟಕದ ಸಂಘಟನಾ ಸಂಚಾಲಕರಾಗಿ ಭಾರತಿ, ಸಂಘಟನಾ ಸಂಚಾಲಕರಾಗಿ ಶಿಲ್ಪಮಂಜುನಾಥ್ ಹೆಚ್.ಆರ್, ಕಣುಮಪ್ಪ, ತಿಪ್ಪೇಸ್ವಾಮಿ, ಯೋಗೀಶ್, ವೀರೇಶ್, ಜಯಣ್ಣ, ಉಮೇಶ್, ಗಿರಿಜಮ್ಮ, ಶಿವಮ್ಮ, ಅಂಬಿಕಾ, ರಾಘವೇಂದ್ರ, ಪುಟ್ಟರಾಜು, ಹನುಮೇಶ್, ಅಲ್ಪಸಂಖ್ಯಾತ ಜಿಲ್ಲಾ ಘಟಕದ ಸಂಚಾಲಕರಾಗಿ ದಾದಾಪೀರ್ ಇವರುಗಳನ್ನು ನೇಮಕಗೊಳಿಸಲಾಯಿತು.
ಪದಾಧಿಕಾರಿಗಳನ್ನು ಆಯ್ಕೆಗೊಳಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾವಾದದ ರಾಜ್ಯ ಬೆಂಗಳೂರು ವಿಭಾಗೀಯ ಪ್ರಧಾನ ಸಂಚಾಲಕ ಕೆ.ಮಂಜುನಾಥ್ ಹೆಗ್ಗೆರೆ ಬುದ್ದ, ಬಸವ, ಅಂಬೇಡ್ಕರ್‌ರವರ ತತ್ವ ಸಿದ್ದಾಂತದ ಮೇಲೆ ದೀನ ದಲಿತರ, ಶೋಷಿತರ, ಧ್ವನಿಯಿಲ್ಲದವರ ಪರವಾಗಿ ಕೆಲಸ ಮಾಡುತ್ತಿದೆ.
ದಲಿತರ ಮೇಲೆ ಎಲ್ಲಿಯೆ ದೌರ್ಜನ್ಯ, ದಬ್ಬಾಳಿಕೆ, ಅನ್ಯಾಯವಾದರೆ ಪದಾಧಿಕಾರಿಗಳು ಹೋರಾಡಬೇಕು. ಅದಕ್ಕೆ ನಮ್ಮ ಸಂಘಟನೆ ಸದಾ ಬೆಂಬಲವಾಗಿರುತ್ತದೆ. ಮುಂದಿನ ದಿನಗಳಲ್ಲಿ ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ನಡೆಸಲಾಗುವುದೆಂದು ಹೇಳಿದರು.
ಹೆಚ್.ಎಸ್.ಮಾರುತೇಶ್, ಹನುಮೇಶ್ ಕೆ. ಉಮೇಶ್ ವಿ, ಆರ್.ಭಾಗ್ಯಮ್ಮ, ಹೆಚ್.ಆರ್.ಮಂಜುನಾಥ್, ಪುಟ್ಟರಾಜ್, ಹೆಚ್.ರಾಘವೇಂದ್ರ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

